ಸೋಮವಾರ, ಜನವರಿ 24, 2022
28 °C

ಮಹಾರಾಷ್ಟ್ರ: 24 ಗಂಟೆಗಳಲ್ಲಿ 370 ಪೊಲೀಸರಿಗೆ ಕೋವಿಡ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಕನಿಷ್ಠ 370 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ಸಂಜೆ ತಿಳಿಸಿದ್ದಾರೆ.

ಸೋಂಕಿತರಲ್ಲಿ 60 ಅಧಿಕಾರಿಗಳು ಮತ್ತು 310 ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ, ರಾಜ್ಯಾದ್ಯಂತ ಒಟ್ಟು 504 ಅಧಿಕಾರಿಗಳು ಮತ್ತು 1,678 ಕಾನ್‌ಸ್ಟೆಬಲ್‌ಗಳು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಮಹಾರಾಷ್ಟ್ರ ಪೊಲೀಸ್‌ನ ಒಟ್ಟು 48,611 ಸಿಬ್ಬಂದಿಗೆ (6,204 ಅಧಿಕಾರಿಗಳು ಮತ್ತು 42,407 ಕಾನ್‌ಸ್ಟೆಬಲ್‌ಗಳು) ಸೋಂಕು ದೃಢಪಟ್ಟಿದೆ.

ಕೋವಿಡ್‌ನಿಂದಾಗಿ 46 ಅಧಿಕಾರಿಗಳು ಮತ್ತು 458 ಕಾನ್‌ಸ್ಟೆಬಲ್‌ಗಳು ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಬುಧವಾರ 46,723 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ, ಇದು ಹಿಂದಿನ ದಿನಕ್ಕಿಂತ ಶೇಕಡಾ 27 ಕ್ಕಿಂತ ಹೆಚ್ಚಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು