ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಭಾರತವನ್ನು ನಡುಗಿಸಿದ ಭೂಕಂಪ: ಮನೆಗಳಿಂದ ಹೊರಗೆ ಓಡಿ ಬಂದ ಜನ 

Last Updated 21 ಮಾರ್ಚ್ 2023, 18:12 IST
ಅಕ್ಷರ ಗಾತ್ರ

ದೆಹಲಿ: ಮಂಗಳವಾರ ರಾತ್ರಿ ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ಹಲವು ಸೆಕೆಂಡ್‌ಗಳ ಕಾಲ ಪ್ರಬಲ ಭೂಕಂಪ ಸಂಭವಿಸಿದ್ದು, ಜನರಲ್ಲಿ ಭೀತಿ ಆವರಿಸಿದೆ.

ಅಫ್ಗಾನಿಸ್ತಾನದ ಜುರ್ಮ್‌ನಿಂದ 40 ಕಿ.ಮೀ ದೂರದಲ್ಲಿ, 190 ಕಿ.ಮೀ ಆಳದಲ್ಲಿ 6.5ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಸೇವೆ ಇಲಾಖೆ ಮೊದಲಿಗೆ ತಿಳಿಸಿತ್ತು.

ವರದಿ ಪರಿಷ್ಕರಿಸಿರುವ ಭಾರತೀಯ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ, ರಾತ್ರಿ 10.17ರ ಸುಮಾರಿನಲ್ಲಿ 6.6 ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ತಿಳಿಸಿದೆ. ಉತ್ತರ ಅಫ್ಗಾನಿಸ್ತಾನದ ಆಗ್ನೇಯ ಫೈಜಾಬಾದ್‌ನ ದಕ್ಷಿಣಕ್ಕೆ 133 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದುವನ್ನು ಗುರುತಿಸಿದೆ.

ಇದರ ಪರಿಣಾಮವಾಗಿ ಕಾಶ್ಮೀರ, ದೆಹಲಿ, ಪಂಜಾಬ್‌, ಉತ್ತರ ಪ್ರದೇಶಗಳಲ್ಲಿ ಪ್ರಬಲ ಕಂಪನದ ಅನುಭವವಾಗಿದೆ. ಆತಂಕಗೊಂಡ ಜನರು ತಮ್ಮ ಮನೆಗಳಿಂದ ಹೊರಗೆ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT