ಗುರುವಾರ , ಜನವರಿ 21, 2021
22 °C
ಒಬ್ಬ ಆರೋಪಿ ಗೈರು, ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ

ಮಾಲೆಗಾಂವ್ ಸ್ಪೋಟ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂಸದೆ ಪ್ರಗ್ಯಾ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಾಲೆಗಾಂವ್ ಸ್ಪೋಟ ಪ್ರಕರಣದ ಆರೋಪಿಯಲ್ಲೊಬ್ಬರಾದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಸೋಮವಾರ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದರು.

ಪ್ರಗ್ಯಾ ಠಾಕೂರ್ ಸೇರಿದಂತೆ ಇತರೆ ನಾಲ್ವರು ಆರೋಪಿಗಳಾದ ಲೆ.ಕನರ್ಲ್ ಪ್ರಸಾದ್ ಪುರೋಹಿತ್, ಸಮೀರ್ ಕುಲಕರ್ಣಿ, ರಮೇಶ್ ಉಪಾಧ್ಯಾಯ್ ಮತ್ತು ಸುಧಾಕರ್ ಚತುರ್ವೇದಿ ಸೋಮವಾರ ನ್ಯಾಯಾಲಯಕ್ಕೆ ಹಾಜರಾದರು. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅಜಯ್ ರಹಿರ್ಕಾರ್ ಮತ್ತು ಸುಧಾಕರ್ ದ್ವಿವೇದಿ ಗೈರಾಗಿದ್ದರು. ಪ್ರಕರಣದ ನಾಲ್ವರು ಆರೋಪಿಗಳೊಂದಿಗೆ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಮೀಸಲಿಟ್ಟಿದ್ದ ಬಾಕ್ಸ್‌ಗಳಲ್ಲಿ ಪ್ರಗ್ಯಾ ಅವರನ್ನೂ ಕೂರಿಸಲಾಗಿತ್ತು.

ಆರೋಪಿ ದ್ವಿವೇದಿ ಗೈರಾದ ಕಾರಣ, ಸಾಕ್ಷ್ಯಿದಾರರ ವಿಚಾರಣೆ ನಡೆಸಲು ವಕೀಲರಿಗೆ ಸಾಧ್ಯವಾಗಲಿಲ್ಲ. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು  ಮಂಗಳವಾರಕ್ಕೆ ಮುಂದೂಡಿತು.

ಡಿಸೆಂಬರ್ 19, 2020 ರಂದು ವಿಶೇಷ ನ್ಯಾಯಾಧೀಶ ಪಿ ಆರ್ ಸಿತ್ರೆ ಅವರು ಠಾಕೂರ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗಲು 'ಕೊನೆಯ ಅವಕಾಶ’ ನೀಡಿದ್ದರು. ಇದೇ ವೇಳೆ  ಪ್ರಗ್ಯಾ ಅವರು ಎರಡು ಬಾರಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಮೊದಲು, 2019 ರಲ್ಲಿ, ಈ ಪ್ರಕರಣದ ಏಳು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 2008ರಲ್ಲಿ ನಡೆದ ಈ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು