ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ ಬೀದಿ ನಾಯಿ ಹತ್ಯೆ: ಆರೋಪಿ ಬಂಧನ

Last Updated 6 ಮೇ 2021, 5:53 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ಉಪನಗರ ಗೋರೆಗಾಂವ್‌ನಲ್ಲಿ ಬೀದಿ ನಾಯಿಯೊಂದನ್ನು ಥಳಿಸಿ, ಹತ್ಯೆ ಮಾಡಿದ ಆರೋಪದಡಿ 31 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

‘ಈ ಘಟನೆ ಮಂಗಳವಾರ ನಡೆದಿದ್ದು, ಇಮ್ರಾನ್‌ ಶಾ ಎಂಬಾತನನ್ನು ಬಂಗೂರ್‌ ನಗರ ಪೊಲೀಸರು ಬಂಧಿಸಿದ್ದಾರೆ. ತನ್ನ ಬೈಕ್‌ನ ಸೀಟ್‌ ಕವರ್‌ ಅನ್ನು ಹರಿದು ಹಾಕಿತ್ತು ಎಂಬ ಕಾರಣಕ್ಕೆ ನಾಯಿಯನ್ನು ಥಳಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

ಬೀದಿ ನಾಯಿಯನ್ನು ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕೆಲ ಬಳಕೆದಾರರುಈ ವಿಡಿಯೊವನ್ನು ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಲ್ಸೆ ಪಾಟೀಲ್ ಅವರಿಗೆ ಟ್ವಿಟರ್‌ನಲ್ಲಿ ಟ್ಯಾಗ್‌ ಮಾಡಿದ್ದರು.

ಆರೋಪಿ, ನಾಯಿಯನ್ನು ಕಬ್ಬಿಣದ ಸರಳಿನಿಂದ ಥಳಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT