ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪುಟ್ನಿಕ್‌–ವಿ‘ ಲಸಿಕೆ: ಡಿಆರ್‌ಎಲ್‌ ಜೊತೆ ಮಣಿಪಾಲ್ ಹಾಸ್ಪಿಟಲ್ಸ್‌ ಒಪ್ಪಂದ

Last Updated 6 ಜೂನ್ 2021, 7:28 IST
ಅಕ್ಷರ ಗಾತ್ರ

ನವದೆಹಲಿ: ಮಣಿಪಾಲ್ ಹಾಸ್ಪಿಟಲ್ಸ್‌ ಸಮೂಹವು ತನ್ನ ಕೋವಿಡ್‌ ಲಸಿಕೆ ಕಾರ್ಯಕ್ರಮದಲ್ಲಿ ‘ಸ್ಪುಟ್ನಿಕ್‌–ವಿ’ ಯನ್ನು ಸೇರ್ಪಡೆ ಮಾಡಿದ್ದು, ಈ ಸಂಬಂಧಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ (ಡಿಆರ್‌ಎಲ್‌) ಜೊತೆ ಕೈಜೋಡಿಸಿದೆ.

ಮಣಿಪಾಲ್ ಹಾಸ್ಪಿಟಲ್ಸ್‌ನ ಲಸಿಕೆ ಕಾರ್ಯಕ್ರಮವು ಈಗಾಗಲೇ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳನ್ನು ಒಳಗೊಂಡಿದೆ.

‘ಬೆಂಗಳೂರಿನಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಸ್ಪುಟ್ನಿಕ್‌–ವಿ ಲಸಿಕೆಯನ್ನು ಸೀಮಿತ ಸಂಖ್ಯೆಯ ಜನರಿಗೆ ನೀಡುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿತ್ತು. ಡಿಆರ್‌ಎಲ್‌ ಜೊತೆಗೂಡಿ ಈ ಲಸಿಕೆ ನೀಡುವ ಸಂಬಂಧ ಸುಸಜ್ಜಿತ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಮೂಹವು ಕ್ರಮ ಕೈಗೊಂಡಿದೆ’ ಎಂದು ಮಣಿಪಾಲ್ ಹೆಲ್ತ್‌ ಎಂಟರ್‌ಪ್ರೈಜಸ್‌ನ ಸಿಒಒ ಕಾರ್ತಿಕ್ ರಾಜಗೋಪಾಲ್ ತಿಳಿಸಿದ್ದಾರೆ.

‘ಸಮೂಹದ ಆಸ್ಪತ್ರೆಗಳಲ್ಲಿ ಈ ವರೆಗೆ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳನ್ನು ನೀಡುವ ಕಾರ್ಯಕ್ರಮವನ್ನು ಯಶಸ್ಸಿಯಾಗಿ ನಿರ್ವಹಿಸಲಾಗಿದೆ. ಈಗ ಸ್ಪುಟ್ನಿಕ್‌–ವಿ ಲಸಿಕೆಯನ್ನು ನೀಡುವ ಮೂಲಕ ಒಟ್ಟಾರೆ ಲಸಿಕೆ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

‘ಬರುವ ದಿನಗಳಲ್ಲಿ ಸಾಧ್ಯವಿರುವಷ್ಟು ಜನರಿಗೆ ಸ್ಪುಟ್ನಿಕ್‌–ವಿ ಲಸಿಕೆಯನ್ನು ನೀಡುವ ಆಶಾಭಾವ ಹೊಂದಿದ್ದೇವೆ’ ಎಂದು ಡಾ.ರೆಡ್ಡೀಸ್‌ ಬ್ರ್ಯಾಂಡೆಡ್‌ ಮಾರ್ಕೆಟ್‌ನ ಸಿಇಒ ಎಂ.ವಿ.ರಮಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT