ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಒಡೆದರೆ ಪ್ರಕರಣ ರದ್ದು ಎಂಬ ಸಂದೇಶ ನನಗೆ ನೀಡಲಾಗಿತ್ತು: ಸಿಸೋಡಿಯಾ

ಪಕ್ಷ ವಿಭಜಿಸುವಂತೆ ಬಿಜೆಪಿಯಿಂದ ಸಂದೇಶ: ಸಿಸೋಡಿಯಾ
Last Updated 22 ಆಗಸ್ಟ್ 2022, 20:28 IST
ಅಕ್ಷರ ಗಾತ್ರ

ನವದೆಹಲಿ: ಎಎಪಿಯನ್ನು ಒಡೆದು ಬಿಜೆಪಿ ಸೇರಿದರೆ ತಮ್ಮ ವಿರುದ್ಧ ಇರುವ ಎಲ್ಲ ಪ್ರಕರಣಗಳನ್ನು ಕೈಬಿಡಲಾಗುವುದು ಎಂಬ ಸಂದೇಶವನ್ನು ತಮಗೆ ನೀಡಲಾಗಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಸೋಮವಾರ ಹೇಳಿದ್ದಾರೆ. ಇದರ ಆಡಿಯೊ ರೆಕಾರ್ಡ್ ಇದೆ. ಸೂಕ್ತ ಸಂದರ್ಭದಲ್ಲಿ ಅದನ್ನು ಬಹಿರಂಗಪಡಿಸಲಾಗುವುದು ಎಂದು ಎಎಪಿ ಮೂಲಗಳು ತಿಳಿಸಿವೆ. ಅಬಕಾರಿ ನೀತಿ ಜಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದಲ್ಲಿ ಸಿಸೋಡಿಯಾ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ.

ಆದರೆ, ಸಿಸೋಡಿಯಾ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಸಿಸೋಡಿಯಾ ಅವರು ಕತೆ ಕಟ್ಟುತ್ತಿದ್ದಾರೆ ಎಂದು ಬಿಜೆಪಿ ಸಂಸದ ಮನೋಜ್‌ ತಿವಾರಿ ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್‌ ಮಾದರಿ ಏನು ಎಂಬುದು
ಈಗ ಬಹಿರಂಗವಾಗಿದೆ. ಅದು ಮೊಹಲ್ಲಾ ಕ್ಲಿನಿಕ್‌ನಿಂದ ಮೊಹಲ್ಲಾ ಮದ್ಯದ ಅಂಗಡಿವರೆಗೆ ಸಾಗಿದೆ. ಸ್ವರಾಜ್‌ ಈಗ ಶರಾಬುರಾಜ್‌ ಆಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಶಿಮ್ಲಾದಲ್ಲಿ ಹೇಳಿದ್ದಾರೆ.


2024ರ ಚುನಾವಣೆಗೆ ಬಿಜೆಪಿ ಈಗಲೇ ಸಿದ್ಧವಾಗುತ್ತಿರುವುದು ಏಕೆ? ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ

ಅಖಿಲೇಶ್‌ ಯಾದವ್‌, ಎಸ್‌ಪಿ ಮುಖ್ಯಸ್ಥ

ಅಬಕಾರಿ ನೀತಿ ಜಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಕೇಜ್ರಿವಾಲ್‌ ಮೌನ ತಾಳಿರುವುದು ಅವರು ಅತ್ಯಂತ ಅಪ್ರಾಮಾಣಿಕ ಎಂಬುದನ್ನು ಸಾಬೀತು ಮಾಡಿದೆ

– ಗೌರವ್‌ ಭಾಟಿಯಾ, ಬಿಜೆಪಿ ವಕ್ತಾರ

ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದ ಕೆಲಸಕ್ಕಾಗಿ ಸಿಸೋಡಿಯಾ ಅವರಿಗೆ ‘ಭಾರತರತ್ನ’ ನೀಡಬೇಕಿತ್ತು. ಆದರೆ, ರಾಜಕೀಯ ಉದ್ದೇಶಕ್ಕಾಗಿ ಅವರ ಮೇಲೆ ಕೇಂದ್ರವು ಎರಗುತ್ತಿದೆ

– ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT