ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರದ್ಧಾ ವಾಲಕರ್‌ ಹತ್ಯೆ ಪ್ರಕರಣ: ಡಿಎನ್‌ಎ ಹೋಲಿಕೆ

Last Updated 4 ಜನವರಿ 2023, 11:15 IST
ಅಕ್ಷರ ಗಾತ್ರ

ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲಕರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎನ್‌ಎ ಪರೀಕ್ಷೆ ವರದಿ ಬಂದಿದ್ದು, ಪೊಲೀಸರು ಸಂಗ್ರಹಿಸಿದ್ದ ಕೂದಲು ಮತ್ತು ಮೂಳೆಯ ಮಾದರಿಗಳು ಆಕೆಯದ್ದೇ ಎಂದು ದೃಢಪಟ್ಟಿದೆ.

28 ವರ್ಷದ ಶ್ರದ್ಧಾಳನ್ನು ಆಕೆಯ ಸಹಜೀವನ ಸಂಗಾತಿ ಅಫ್ತಾಬ್ ಅಮೀನ್ ಪೂನಾವಾಲಾ ಹತ್ಯೆ ಮಾಡಿ, ದೇಹದ ಭಾಗಗಳನ್ನು 35 ತುಂಡಗಳಾಗಿ ಕತ್ತರಿಸಿ ಎಸೆದಿದ್ದ. ಆರೋಪಿ ವಿಚಾರಣೆ ವೇಳೆ ಹತ್ಯೆ ಒಪ್ಪಿಕೊಂಡಿದ್ದರೂ ಕೂಡ ಪ್ರಕರಣ ಸಾಬೀತುಗೊಳಿಸುವ ಸೂಕ್ತ ಸಾಕ್ಷ್ಯ ಪೊಲೀಸರಿಗೆ ಸಿಕ್ಕಿರಲಿಲ್ಲ.

ಪೂನಾವಾಲಾನನ್ನು ಬಂಧಿಸಿದ್ದ ಪೊಲೀಸರು, ಆತ ನೀಡಿದ ಮಾಹಿತಿ ಮೇರೆಗೆ ಗುರುಗ್ರಾಮ ಮತ್ತು ಮೆಹರೌಲಿ ಸೇರಿದಂತೆ ದೆಹಲಿ ಎನ್‌ಸಿಆರ್‌ನ ಅರಣ್ಯ ಪ್ರದೇಶಗಳಲ್ಲಿ ಶೋಧ ನಡೆಸಿ ಆಕೆಯ ಮೂಳೆ ಮತ್ತು ಕೂದಲನ್ನು ವಶಪಡಿಸಿಕೊಂಡಿದ್ದರು. ಆದರೆ ಡಿಎನ್‌ಎ ಪರೀಕ್ಷೆ ವೇಳೆ ಕೂಡ ಪೊಲೀಸರಿಗೆ ತೃಪ್ತಿದಾಯಕ ಫಲಿತಾಂಶ ಲಭಿಸಿರಲಿಲ್ಲ.

ಡಿಎನ್‌ಎ ಪರೀಕ್ಷೆ ವೇಳೆ ಮೂಳೆ ಮತ್ತು ಕೂದಲಿನ ಮಾದರಿಗಳನ್ನು ದೃಢಪಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ 'ಡಿಎನ್‌ಎ ಮೈಟೊಕಾಂಡ್ರಿಯಲ್ ಪ್ರೊಫೈಲಿಂಗ್'ಗಾಗಿ ಹೈದರಾಬಾದ್‌ನ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ವಿಭಾಗಕ್ಕೆ ಮಾದರಿಯನ್ನು ಕಳುಹಿಸಲಾಗಿತ್ತು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಸಾಗರ್ ಪ್ರೀತ್ ಹೂಡಾ ಹೇಳಿದ್ದಾರೆ.

ಪರೀಕ್ಷೆಯ ಫಲಿತಾಂಶ ಬುಧವಾರ ಲಭಿಸಿದ್ದು, ಮೂಳೆ ಮತ್ತು ಕೂದಲಿನ ಮಾದರಿ ಆಕೆಯ ತಂದೆ ಮತ್ತು ಸಹೋದರನ ಡಿಎನ್‌ಎಗೆ ಹೋಲಿಕೆಯಾಗಿದೆ ಎಂದು ಹೂಡಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT