ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಾ ಲಡಾಖ್‌: ಚೀನಾ–ಭಾರತ ಸೇನಾ ಕಮಾಂಡರ್‌ಗಳ ಸಭೆ

Last Updated 19 ಫೆಬ್ರುವರಿ 2021, 9:51 IST
ಅಕ್ಷರ ಗಾತ್ರ

ನವದೆಹಲಿ: ‘ಪ್ಯಾಂಗಾಂಗ್ ಸರೋವರ ಪ್ರದೇಶದಿಂದ ಉಭಯ ರಾಷ್ಟ್ರಗಳ ಸೇನೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಇದರ ಬೆನ್ನಲೇ ಚೀನಾ ಮತ್ತು ಭಾರತೀಯ ಸೇನೆಯ ಹಿರಿಯ ಕಮಾಂಡರ್‌ಗಳು ಶನಿವಾರ ಹೊಸದಾಗಿ ಉನ್ನತ ಮಟ್ಟದ ಮಾತುಕತೆ ನಡೆಸಲಿದ್ದಾರೆ’ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

‘ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿಯಿರುವ ಚೀನಾ ಮೊಲ್ಡೊ ಗಡಿ ಪ್ರದೇಶದಲ್ಲಿ ಈ ಸಭೆ ನಡೆಯಲಿದೆ’ ಎಂದು ಮೂಲಗಳು ಹೇಳಿವೆ.

‘ಒಂಬತ್ತು ತಿಂಗಳ ಬಳಿಕ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಡದಿಂದ ಉಭಯ ರಾಷ್ಟ್ರಗಳ ಸೇನೆಗಳು ಹಿಂದಕ್ಕೆ ಸರಿದಿವೆ. ಈ ಪ್ರಕ್ರಿಯೆಯು ಫೆಬ್ರುವರಿ 10 ರಂದು ಆರಂಭವಾಯಿತು. ಸದ್ಯ ಎರಡು ಸೇನೆಯೂ ಸಂಪೂರ್ಣವಾಗಿ ತಮ್ಮ ಸೇನೆಯನ್ನು ವಾಪಾಸ್‌ ಕರೆಸಿಕೊಂಡಿವೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT