ಸೋಮವಾರ, ಮೇ 16, 2022
29 °C
ಅಮೆರಿಕದ ‌ಕಾನ್ಸುಲ್ ವ್ಯವಹಾರಗಳ ಮುಖ್ಯಸ್ಥ ಡಾನ್‌ ಎಲ್‌. ಹೆಫ್ಲಿನ್‌

‘ಭಾರತೀಯರಿಗೆ ಈ ವರ್ಷ 8 ಲಕ್ಷ ವೀಸಾ ನೀಡಿಕೆ ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯರ ವೀಸಾ ಅರ್ಜಿಯ ದೈನಂದಿನ ಸಂದರ್ಶನಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಭಾರತದಲ್ಲಿನ ಅಮೆರಿಕದ ‌ಕಾನ್ಸುಲ್ ವ್ಯವಹಾರಗಳ ಮುಖ್ಯಸ್ಥ ಡಾನ್‌ ಎಲ್‌. ಹೆಫ್ಲಿನ್‌ ತಿಳಿಸಿದರು. 

ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲ್ ಜನರಲ್ ಕಚೇರಿಯಲ್ಲಿ ಮಂಗಳವಾರ ನಡೆದ ವರ್ಚುವಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನ್ಸುಲರ್ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸುವ ಪ್ರಯತ್ನಗಳು ಚುರುಕುಗೊಂಡಿದ್ದು, ಮುಂದಿನ ಒಂದು ವರ್ಷದಲ್ಲಿ ಸುಮಾರು 8 ಲಕ್ಷ ವೀಸಾಗಳ ಪ್ರಕ್ರಿಯೆ  ಪೂರ್ಣ
ಗೊಳಿಸುವ ಆಶಯವನ್ನು ಅಮೆರಿಕ ರಾಯಭಾರ ಕಚೇರಿ ಹೊಂದಿದೆ ಎಂದರು.

ವೀಸಾಗಳ ಸಂದರ್ಶನ ಪ್ರಕ್ರಿಯೆ ಪೂರ್ಣಗೊಳಿಸಲು ಹಲವು ಸ್ಲಾಟ್‌ಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿಗಳ ವೀಸಾ ಕುರಿತು ಶೀಘ್ರದಲ್ಲೇ ನಿರ್ಧರಿಸಲಾಗುವುದು  ಎಂದರು. ನವದೆಹಲಿಯಲ್ಲಿರುವ ರಾಯಭಾರ ಕಚೇರಿ ಮತ್ತು ಕೋಲ್ಕತ್ತ, ಚೆನ್ನೈ, ಮುಂಬೈ ಮತ್ತು ಹೈದರಾಬಾದ್‌ನಲ್ಲಿರುವ ಕಾನ್ಸುಲೇಟ್‌ಗಳು ಕೋವಿಡ್ -19 ಸಾಂಕ್ರಾಮಿಕದ ಪೂರ್ವದಲ್ಲಿ ವಾರ್ಷಿಕ 12 ಲಕ್ಷ ವೀಸಾ ಸಂದರ್ಶನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘2023 ಅಥವಾ 2024ರಲ್ಲಿ 12 ಲಕ್ಷ ವೀಸಾ ವಿತರಣೆಯ ಗುರಿ ಮುಟ್ಟುವ ಆಶಯ ಹೊಂದಿದ್ದೇವೆ. ವೀಸಾ ಮತ್ತು ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಕಾನ್ಸುಲರ್ ಕಚೇರಿಗಳು ಸಹಾಯವಾಣಿಗಳನ್ನು ಸ್ಥಾಪಿಸಿವೆ’ ಎಂದು ಹೆಫ್ಲಿನ್ ಹೇಳಿದರು.ಭಾರತೀಯರಿಗೆ ಎಚ್‌1ಬಿ ವೀಸಾಕ್ಕೆ ಹೆಚ್ಚುವರಿ ಸ್ಲಾಟ್‌ಗಳನ್ನು ತೆರೆಯಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಹೆಫ್ಲಿನ್‌, ಅದು ವಾಷಿಂಗ್ಟನ್‌ನಲ್ಲಿ ನಿರ್ಧಾರವಾಗುವ ವಿಷಯ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು