ಗುರುವಾರ , ಜೂನ್ 30, 2022
21 °C

ವೆಬ್ ಸರಣಿಗೆಂದು ಚಿತ್ರೀಕರಣ: ಪೋರ್ನ್ ಸೈಟಲ್ಲಿ ವಿಡಿಯೊ ರಿಲೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಾಡೆಲ್ ಒಬ್ಬರನ್ನು ವೆಬ್ ಸಿರೀಸ್ ಎಂದು ನಂಬಿಸಿ ನಿಕಟ ದೃಶ್ಯಗಳನ್ನು ಚಿತ್ರೀಕರಿಸಿ ಪೋರ್ನ್ ಸೈಟಲ್ಲಿ ಬಿಡುಗಡೆ ಮಾಡಿರುವ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

24 ವರ್ಷದ ಮಾಡೆಲ್ ಕೊಟ್ಟ ದೂರಿನನ್ವಯ ನಾಲ್ವರು ಅಪರಿಚಿತರ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ. ವೆಬ್ ಸಿರೀಸ್‌ ಎಂದು ಚಿತ್ರೀಕರಣ ನಡೆಸಲಾಗಿತ್ತು. ಆದರೆ, ಇದೀಗ ಆ ದೃಶ್ಯಗಳು ಪೋರ್ನ್ ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಅವರು ದೂರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಮಲಾಡ್ ಬಳಿಯ ಮಾಧ್ ದ್ವೀಪದಲ್ಲಿ ವೆಬ್ ಸರಣಿಗೆ ಎಂದು ಹೇಳಿ ಕೆಲವು ನಿಕಟ ದೃಶ್ಯಗಳನ್ನು ಆರೋಪಿಗಳು ಚಿತ್ರೀಕರಿಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

‘ಆದರೆ, ಆ ದೃಶ್ಯಗಳು ಪೋರ್ನ್ ಸೈಟಲ್ಲಿ ಇವೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ನಾಲ್ವರು ವಂಚಕರಿಗಾಗಿ ಶೋಧ ನಡೆಸುತ್ತಿದ್ದೇವೆ’ ಎಂದು ಮಾಲ್ವಾನಿ ಪೊಲೀಸ್ ಠಾಣೆ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು