ಬುಧವಾರ, ಸೆಪ್ಟೆಂಬರ್ 22, 2021
23 °C

ರಾಜ್ಯದ ಜನರು ಮಿಜೋರಾಂಗೆ ತೆರಳದಿರಿ ಎಂದ ಅಸ್ಸಾಂ ಸರ್ಕಾರ; ಕಾಂಗ್ರೆಸ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಗಡಿ ವಿವಾದದ ಹಿನ್ನಲೆಯಲ್ಲಿ ತನ್ನ ನೆರೆಯ ರಾಜ್ಯ ಮಿಜೋರಾಂಗೆ ತೆರಳದಂತೆ ರಾಜ್ಯದ ಜನರಿಗೆ ಸೂಚನೆ ನೀಡಿರುವ ಅಸ್ಸಾಂ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿ ಕಾರಿದೆ.

ಮಿಜೋರಾಂ ಜತೆಗಿನ ಅಂತರ ರಾಜ್ಯ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಂಘರ್ಷದ ವೇಳೆ ಆರು ಪೊಲೀಸರು ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದರು.‌ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದನ್ನು ಗಮನದಲ್ಲಿರಿಸಿ ಅಸ್ಸಾಂ ಸರ್ಕಾರ ಜನರಿಗೆ ಸೂಚನೆ ನೀಡಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧಿಕಾರದಲ್ಲಿ ಮುಂದುವರಿಯಬೇಕೇ? ಎಂದು ಪ್ರಶ್ನಿಸಿದ್ದಾರೆ.

ʼದೇಶದ ಇತಿಹಾದಲ್ಲೇ ಇದು ಅತ್ಯಂತ ಮುಜುಗರದ ದಿನ! ದೇಶದ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸಲು ಸಾಧ್ಯವಾಗದಿರುವಾಗ, ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಅವರ ಹುದ್ದೆಗಳಲ್ಲಿ ಮುಂದುವರಿಯುವ ಹಕ್ಕು ಇದೆಯೇ? ಮೋದಿ ಇದ್ದರೆ ಇವೆಲ್ಲ ಸಾಧ್ಯʼ‌ ಎಂದು ಕುಟುಕಿದ್ದಾರೆ.

ʼಅಸ್ಸಾಂ ಜನರ ವೈಯಕ್ತಿಕ ಸುರಕ್ಷತೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದನ್ನು ಸಹಿಸಲಾಗದು. ಹೀಗಾಗಿ ಸದ್ಯದ ಸ್ಥಿತಿಯನ್ನು ಪರಿಗಣಿಸಿ ಅಸ್ಸಾಂ ಜನರು ಮಿಜೋರಾಂಗೆ ಪ್ರಯಾಣಿಸದಂತೆ ಸೂಚಿಸಲಾಗಿದೆʼ ಎಂದು ಅಸ್ಸಾಂ ಸರ್ಕಾರ ಸೂಚಿಸಿದೆ. ಮಾತ್ರವಲ್ಲದೆ, ಕೆಲಸದ ಕಾರಣಗಳಿಂದಾಗಿ ಮಿಜೋರಾಂನಲ್ಲಿ ಉಳಿದುಕೊಂಡಿರುವವರೂ ʼಅತ್ಯಂತ ಜಾಗರೂಕರಾಗಿರಿʼ ಎಂದೂ ತಿಳಿಸಿದೆ.

ಗಲಭೆ ನಡೆದ ಸ್ಥಳಕ್ಕೆ ಕೇಂದ್ರ ಮೀಸಲು ಪೊಲೀಸ್‌ ಪಡೆಯನ್ನು (ಸಿಆರ್‌ಪಿಎಫ್)‌ ನಿಯೋಜಿಸಲಾಗಿದೆ.

ಇವನ್ನೂ ಓದಿ


​* 
​* 
​* 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು