ಬುಧವಾರ, ಜುಲೈ 6, 2022
22 °C

ಕೋವಿಡ್‌ ನಿಯಂತ್ರಣದ ಎಲ್ಲ ನಿರ್ಬಂಧಗಳನ್ನು ಕೊನೆಗೊಳಿಸಿದ ಮಧ್ಯಪ್ರದೇಶ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭೋಪಾಲ: ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ಮಧ್ಯಪ್ರದೇಶ ಸರ್ಕಾರವು ಮಂಗಳವಾರ ಕೊನೆಗೊಳಿಸಿದೆ. ಸೋಂಕು ಪ್ರಕರಣಗಳ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರ ಈ ಹೆಜ್ಜೆ ಇಟ್ಟಿದೆ.

‘ಕೊರೊನಾ ವೈರಸ್‌ ಪಾಸಿಟಿವಿಟಿ ದರವು ಶೇ 1ಕ್ಕಿಂತ ಕಡಿಮೆಯಾಗಿದೆ. ರಾತ್ರಿ ಕರ್ಫ್ಯೂ ಮಧ್ಯರಾತ್ರಿಯಿಂದಲೇ ಕೊನೆಗೊಳ್ಳಲಿದೆ’ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

‘ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ವೈಯಕ್ತಿಕ ನಡವಳಿಕೆಗಳನ್ನು ನಾಗರಿಕರು ಅನುಸರಿಸಬೇಕು’ ಎಂದು ಅವರು ಕೋರಿದರು.

ಮಧ್ಯಪ್ರದೇಶದಲ್ಲಿ ಸೋಮವಾರ 847 ಹೊಸ ಪ್ರಕರಣಗಳು ವರದಿಯಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು