ಶುಕ್ರವಾರ, ಡಿಸೆಂಬರ್ 4, 2020
21 °C

ಲವ್ ಜಿಹಾದ್‌ಗೆ ಕಡಿವಾಣ: ಕಾಯ್ದೆ ರೂಪಿಸಲು ಮಧ್ಯಪ್ರದೇಶ ‌‌ಸರ್ಕಾರ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

ಭೋಪಾಲ್‌: ‘ಲವ್ ಜಿಹಾದ್’ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾಯ್ದೆ ರೂಪಿಸಲು ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ತೀರ್ಮಾನಿಸಿದೆ. ಉದ್ದೇಶಿತ ಕಾಯ್ದೆಯ ಅನುಸಾರ, ಲವ್‌ ಜಿಹಾದ್‌ ಪ್ರಕರಣಗಳ ಅಪರಾಧವು ಜಾಮೀನುರಹಿತವಾಗಿದ್ದು, ಗರಿಷ್ಠ 5 ವರ್ಷ ಸಜೆ ವಿಧಿಸಲು ಅವಕಾಶ ಇರಲಿದೆ.

‘ಧರ್ಮ ಸ್ವತಂತ್ರ (ಧಾರ್ಮಿಕ ಸ್ವಾತಂತ್ರ್ಯ) ಮಸೂದೆ 2020’ ಅನ್ನು ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಮಂಗಳವಾರ ತಿಳಿಸಿದರು.

ಮತಾಂತರ ಉದ್ದೇಶದಿಂದ ಬಲವಂತವಾಗಿ ಮದುವೆಯಾಗುವ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಐದು ವರ್ಷ ಸಜೆ ವಿಧಿಸಲು ಅವಕಾಶ ಇರಲಿದೆ. ಹತ್ತಿರದ ಸಂಬಂಧಿಕರೇ ದೂರು ನೀಡುವುದು ಕಡ್ಡಾಯ ಆಗಿರಲಿದೆ. ರಾಜ್ಯದಲ್ಲಿ ಲವ್ ಜಿಹಾದ್ ಎಂದು ಗುರುತಿಸಲಾಗುವ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇಂಥ ಕಾಯ್ದೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ, ಮತಾಂತರ ಉದ್ದೇಶದ ಮದುವೆಗಳನ್ನು ಅಸಿಂಧು ಎಂದು ಘೋಷಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಲವ್‌ ಜಿಹಾದ್ ಪ್ರಕಣಗಳಲ್ಲಿ ಮದುವೆಗೆ ಬೆಂಬಲ ನೀಡುವ ವ್ಯಕ್ತಿಗಳನ್ನು ಸಹ ಅರೋಪಿಗಳಾಗಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು