ಬುಧವಾರ, ಜುಲೈ 6, 2022
22 °C
ಮಧ್ಯಪ್ರದೇಶದ ಎಚ್‌ಜಿಯು ವಿವಿಯಿಂದ ತನಿಖೆಗೆ ಆದೇಶ

ತರಗತಿಯಲ್ಲಿ ವಿದ್ಯಾರ್ಥಿನಿ ನಮಾಜು ವಿಡಿಯೊ ವೈರಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಾಗರ್, ಮಧ್ಯಪ್ರದೇಶ: ಮಧ್ಯಪ್ರದೇಶದ ಡಾ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ (ಎಚ್‌ಜಿಯು) ತರಗತಿಯೊಂದರಲ್ಲಿ ಮುಸ್ಲಿಂ ಬಾಲಕಿಯೊಬ್ಬಳು ಹಿಜಾಬ್ ಧರಿಸಿ ನಮಾಜು ಮಾಡಿದಂತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಶನಿವಾರ ಹಿಂದೂ ಜಾಗರಣ ಮಂಚ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿವಿ ತನಿಖೆಗೆ ಆದೇಶಿಸಿದೆ.

ಈ ಬಗ್ಗೆ ಮಾತನಾಡಿದ ಎಚ್‌ಜಿಯು ರಿಜಿಸ್ಟ್ರಾರ್ ಸಂತೋಷ್ ಸಹಗೌರಾ ಅವರು, ‘ಈ ಬಗ್ಗೆ ಬಲಪಂಥೀಯ ಸಂಘಟನೆ ದೂರು ನೀಡಿದೆ. ಹೀಗಾಗಿ ಪ್ರಕರಣದ ತನಿಖೆಗಾಗಿ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು 3 ದಿನಗಳಲ್ಲಿ ವರದಿ ನೀಡಲಿದ್ದು, ಆ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು. 

 ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಇಲ್ಲ. ಆದರೆ ಎಲ್ಲಾ ವಿದ್ಯಾರ್ಥಿಗಳು ಸಭ್ಯ ಉಡುಗೆಗಳಲ್ಲಿ ತರಗತಿಗೆ ಬರಬೇಕು ಎಂದು ಎಚ್‌ಜಿಯು ಮಾಧ್ಯಮ ಅಧಿಕಾರಿ ವಿವೇಕ್ ಜೈಸ್ವಾಲ್ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು