ಬುಧವಾರ, ಮೇ 12, 2021
17 °C

ಕೋವಿಡ್: ಪಂಚಾಯಿತಿ ಚುನಾವಣೆ ಮತದಾನದಿಂದ ದೂರ ಉಳಿದ ಮುಲಾಯಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಟಾವಾ, ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರ ಮನವಿಗೆ ಸ್ಪಂದಿಸಿ ಸೋಮವಾರ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡುವುದರಿಂದ ದೂರ ಉಳಿದರು.

‘81 ವರ್ಷದ ಅವರು ಇದುವರೆಗೆ ಒಮ್ಮೆಯೂ ಮತದಾನವನ್ನು ತಪ್ಪಿಸಿಕೊಂಡಿರಲಿಲ್ಲ. ಕೋವಿಡ್‌ ಕಾರಣದಿಂದ ಮತದಾನಕ್ಕೆ ಬರಬೇಡಿ ಎಂದು ಕೋರಿದ್ದೆವು. ಅವರೂ ಒಪ್ಪಿದರು. ಯಾದವ್ ಅವರು ಸದ್ಯ ದೆಹಲಿಯಲ್ಲಿದ್ದಾರೆ’ ಎಂದು ಅವರ ಸೋದರಳಿಯ ಧರ್ಮೇಂದ್ರ ಯಾದವ್ ತಿಳಿಸಿದರು.

ರಾಜ್ಯದಲ್ಲಿ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಸೋಮವಾರ 20 ಜಿಲ್ಲೆಗಳಲ್ಲಿ 2.23 ಲಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಒಟ್ಟು 3.48 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದು, 3.26 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು