ಭಾನುವಾರ ತಡರಾತ್ರಿ ವಿಮಾನದ ಮೂಲಕ ಪಾರ್ಥೀವ ಶರೀರ ಭಾರತಕ್ಕೆ
ಮೌಂಟ್ ಎವರೆಸ್ಟ್ ಚಾರಣದ ವೇಳೆ ಮುಂಬೈ ಮೂಲದ ವೈದ್ಯೆ ಸಾವು

ಮುಂಬೈ: ನೇಪಾಳದಲ್ಲಿರುವ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪಿಗೆ ಚಾರಣ ಮಾಡುವ ವೇಳೆ ಹೃದಯಾಘಾತದಿಂದ ಮುಂಬೈ ಮೂಲದ ವೈದ್ಯೆ ಮೃತಪಟ್ಟಿದ್ದಾರೆ. ಡಾ.ಪ್ರಜ್ಞಾ ಸಾಮಂತ್ (52) ಮೃತ ಮಹಿಳೆ.
‘ಇವರು ಮುಂಬೈನ ಗುರುಗ್ರಾಮ ನಿವಾಸಿ . ಭಾನುವಾರ ತಡರಾತ್ರಿ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಮುಂಬೈ ತರಲಾಗುತ್ತದೆ. ಸೋಮವಾರ ಇಲ್ಲಿನ ಶಿವಧಾಮ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.