ಗುರುವಾರ , ಜೂನ್ 24, 2021
21 °C

ನಂದಪ್ರಯಾಗ್ ನಗರಸಭೆಗೆ ‘ಅತ್ಯಂತ ಸ್ವಚ್ಛ’ ನಗರ ಗರಿ

ಪಿಟಿಐ Updated:

ಅಕ್ಷರ ಗಾತ್ರ : | |

ಗೋಪೇಶ್ವರ್: ಉತ್ತರಾಖಂಡದ ನಂದಪ್ರಯಾಗ್‌ ನಗರಸಭೆಯು ದೇಶದ ಅತ್ಯಂತ ಸ್ವಚ್ಛ ನಗರಸಭೆ ಎಂಬ ಹಿರಿಮೆಗೆ ಭಾಜನವಾಗಿದೆ.

ರಾಷ್ಟ್ರೀಯ ಸ್ವಚ್ಛತಾ ಮಿಷನ್‌ ಅಡಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಜನರ ಪ್ರತಿಕ್ರಿಯೆಯನ್ನು ಆಧರಿಸಿ ನಂದಪ್ರಯಾಗ್‌ ಅನ್ನು ಸ್ವಚ್ಛ ನಗರಸಭೆ ಎಂದು ಆಯ್ಕೆ ಮಾಡಲಾಗಿದೆ.

ಅಲಕಾನಂದ ಮತ್ತು ಮಂದಾಕಿನಿ ನದಿಗಳ ಸಂಗಮ ಸ್ಥಳದಲ್ಲಿ ಈ ನಗರವು ಇದೆ.

ಆಗಸ್ಟ್‌ 20ರಂದು ನಡೆಯುವ ಆನ್‌ಲೈನ್‌ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ನಂದಪ್ರಯಾಗ್‌ ನಗರ ಸಭೆ ಅಧ್ಯಕ್ಷೆ ಹಿಮಾನಿ ವೈಷ್ಣವ ಮಂಗಳವಾರ ತಿಳಿಸಿದ್ದಾರೆ.

‘ದೇಶದ 4,000ಕ್ಕೂ ಅಧಿಕ ನಗರಸಭೆಗಳನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿರುವುದು ಖುಷಿ ನೀಡಿದೆ. ಇದರಿಂದ ಹೆಮ್ಮೆಯೂ ಆಗಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ತ್ಯಾಜ್ಯ ವಿಲೇವಾರಿಯನ್ನು ನಾವು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇವೆ. ಹಸಿ ಮತ್ತು ಒಣ ತ್ಯಾಜ್ಯವನ್ನು ‍ಪ್ರತ್ಯೇಕಿಸುತ್ತಿದ್ದೇವೆ. ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸುತ್ತಿದ್ದೇವೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

    ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

    ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

    ಈ ವಿಭಾಗದಿಂದ ಇನ್ನಷ್ಟು