ಮಂಗಳವಾರ, ಡಿಸೆಂಬರ್ 7, 2021
23 °C

ಸ್ವಾವಲಂಬಿ ಗೋವಾ ಅಭಿವೃದ್ಧಿಗಾಗಿ ಡಬಲ್‌ ಎಂಜಿನ್‌ ಸರ್ಕಾರ ಮುಂದುವರಿಸಿ– ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಗೋವಾ ರಾಜ್ಯವನ್ನು ಸ್ವಾವಲಂಬಿಯಾಗಿ ಅಭಿವೃದ್ಧಿಪಡಿಸಲು ‘ಡಬಲ್‌ ಎಂಜಿನ್‌’ ಸರ್ಕಾರದ ಆಡಳಿತವನ್ನು ಮುಂದುವರಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಕೋರಿದರು.

‘ಆತ್ಮನಿರ್ಭರ ಭಾರತ್‌ ಸ್ವಯಂಪೂರ್ಣ ಗೋವಾ‘ ಕಾರ್ಯಕ್ರಮದ ಫಲಾನುಭವಿಗಳ ಜೊತೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದವನ್ನು ನಡೆಸುವ ವೇಳೆ ಅವರು ಈ ಮಾತು ಹೇಳಿದರು.

ಕೇಂದ್ರ ಮತ್ತು ರಾಜ್ಯ ಎರಡೂ ಕಡೆಯೂ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿ ಇರಬೇಕು ಎಂಬುದಕ್ಕೆ ಉಪಮೆಯಾಗಿ ಅವರು ‘ಡಬಲ್‌ ಎಂಜಿನ್‌‘ ಪದವನ್ನು ಬಳಸಿದರು.

ಆದಾಯ ಮತ್ತು ಅಭಿವೃದ್ಧಿಯ ಸಾಧ್ಯತೆಗಳ ಪೂರ್ಣ ಬಳಕೆಯಾದಾಗ ಮಾತ್ರವೇ ಗೋವಾ ರಾಜ್ಯವು ಸ್ವಾವಲಂಬಿ ಆಗುವುದು ಸಾಧ್ಯ. ಸ್ವಯಂಪೂರ್ಣ ಗೋವಾ ಎಂದರೆ ಜನರ ಆಶೋತ್ತರಗಳಿಗೆ ಸ್ಪಂದಿಸುವುದೇ ಆಗಿದೆ ಎಂದರು.

ಗೋವಾದಲ್ಲಿ ಮಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಸ್ಥಳೀಯರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುವುದು ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಉದ್ದೇಶವಾಗಿದೆ.

’ಈ ಕಾರ್ಯಕ್ರಮ ಐದು ತಿಂಗಳು, ಅಥವಾ ಐದು ವರ್ಷದ್ದಲ್ಲ. 25 ವರ್ಷದ ದೂರದೃಷ್ಟಿಯುಳ್ಳ ಅವಧಿಯ ಮೊದಲ ಹಂತದ ಕಾರ್ಯಕ್ರಮ. ಇದೇ ಕಾರಣಕ್ಕೆ ರಾಜ್ಯಕ್ಕೆ ಡಬಲ್‌ ಎಂಜಿನ್‌ ಸರ್ಕಾರದ ಅಗತ್ಯವಿದೆ’ ಎಂದು ಹೇಳಿದರು.

ಈ ಕಾರಣದಿಂದ ಕರಾವಳಿ ರಾಜ್ಯಕ್ಕೆ ಹೀಗಿರುವಂತೆಯೇ ಉತ್ಸಾಹಿ ನಾಯಕತ್ವದ ಅಗತ್ಯವಿದೆ. ಇಡೀ ಗೋವಾದ ಜನರ ಆಶೀರ್ವಾದದೊಮದಿಗೆ ನಾವು ರಾಜ್ಯವನ್ನು ಸ್ವಾವಲಂಬಿ ಮಾಡೋಣ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು