ನವದೆಹಲಿ: ಹಬ್ಬದ ಋತು ಹತ್ತಿರವಾಗುತ್ತಿದೆ. ಜನರು ಆದಷ್ಟು ಕೋವಿಡ್ ನಿಯಮಗಳನ್ನು ಪಾಲಿಸಬೇಕು ಮತ್ತು ‘ಲಸಿಕೆ ಸುರಕ್ಷತೆ ವೃತ್ತ’ದಿಂದ ಯಾರೂ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮನ್ ಕೀ ಬಾತ್ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಷ್ಟಶಕ್ತಿಯ ವಿರುದ್ಧ 'ಮರ್ಯಾದಾ ಪುರುಷೋತ್ತಮ’ ರಾಮನ ಗೆಲುವನ್ನು ದೇಶ ಆಚರಿಸಲಿದೆ. ನಾವು ಕೋವಿಡ್ ವಿರುದ್ಧವೂ ಗೆಲ್ಲಬೇಕು ಎಂಬುದನ್ನು ಮರೆಯಬಾರದು ಎಂದರು.

ಭಾರತವು ಈ ನಿಟ್ಟಿನಲ್ಲಿ ಹಲವು ದಾಖಲೆಗಳನ್ನು ಸ್ಥಾಪಿಸುತ್ತಿದೆ. ಲಸಿಕೆ ಅಭಿಯಾನದಲ್ಲಿನ ದಾಖಲೆಗಳು ಜಾಗತಿಕವಾಗಿ ಚರ್ಚೆಗೆ ಒಳಗಾಗುತ್ತಿವೆ. ನಮ್ಮ ಸರದಿ ಬಂದಾಗ ಲಸಿಕೆ ಪಡೆಯಬೇಕು. ಸುರಕ್ಷತೆಯ ವೃತ್ತದಿಂದ ಯಾರೂ ಹೊರಗುಳಿದಿಲ್ಲ ಎಂದೂ ಖಾತರಿಪಡಿಸಿಕೊಳ್ಳಬೇಕು. ಲಸಿಕೆ ಪಡೆದ ನಂತರವೂ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಲಹೆ ಮಾಡಿದರು.

ವಿಶ್ವ ನದಿ ದಿನ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ನದಿಗಳನ್ನು ಮಾಲಿನ್ಯದಿಂದ ಮುಕ್ತವಾಗಿ ಇರುವಂತೆ ನೋಡಿಕೊಳ್ಳಲು ಸಂಘಟಿತವಾದ ಪ್ರಯತ್ನಗಳು ನಡೆಯಬೇಕು ಎಂದು ಕರೆ ನೀಡಿದರು.

ಅಲ್ಲದೆ, ಮಹಾತ್ಮಗಾಂಧಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಖಾದಿ ಉತ್ಪನ್ನಗಳ ದಾಖಲೆ ವಹಿವಾಟು ನಡೆಯುವಂತೆಯೂ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಇದನ್ನೂ ಓದಿ...ಆರೋಗ್ಯದತ್ತ ಗಮನಹರಿಸಲು ಪಾಠ ಕಲಿಸಿದ ಕೋವಿಡ್: ‘ಮನ್ ಕೀ ಬಾತ್’ನಲ್ಲಿ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.