ಶುಕ್ರವಾರ, ಮಾರ್ಚ್ 31, 2023
32 °C

ಕೇಂದ್ರ ಸಂಪುಟ ಪುನಾರಚನೆ: ಮೋದಿ ಸರ್ಕಾರದಿಂದ ಸಹಕಾರಿ ಕ್ಷೇತ್ರಕ್ಕೆ ಹೊಸ ಸಚಿವಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಸಹಕಾರಿ ಚಳವಳಿಯನ್ನು ಗಟ್ಟಿಗೊಳಿಸುವ ಸಲುವಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸದಾಗಿ ‘ಸಹಕಾರ ಸಚಿವಾಲಯ’ ಸ್ಥಾಪಿಸಲು ನಿರ್ಧರಿಸಿದೆ.

ಕೇಂದ್ರ ಸಚಿವ ಸಂಪುಟ ಬುಧವಾರ ಪುನಾರಚನೆಯಾಗಲಿದೆ ಎಂಬ ವರದಿಗಳ ಬೆನ್ನಲ್ಲೇ, ಹೊಸ ಸಚಿವಾಲಯ ರಚನೆಯ ಮಾಹಿತಿ ಹೊರಬಿದ್ದಿದೆ. ‘ಸಹಕಾರದಿಂದ ಸಮೃದ್ಧಿ (ಸಹಕಾರ್‌ ಸೇ ಸಮೃದ್ಧಿ)’ ಎಂಬ ಧ್ಯೇಯದೊಂದಿಗೆ ಸಚಿವಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅಧಿಕೃತ ಸರ್ಕಾರಿ ಮೂಲಗಳು ಹೇಳಿವೆ.

ಓದಿ: ಕೇಂದ್ರ ಸಚಿವ ಸಂಪುಟ ವಿಸ್ತರಣೆ: ಅಮಿತ್‌ ಶಾ, ಸಂತೋಷ್‌, ಮೋದಿ ಸುದೀರ್ಘ ಸಭೆ

ನೂತನ ಸಚಿವಾಲಯವು ದೇಶದಲ್ಲಿ ಸಹಕಾರಿ ಚಳವಳಿಯನ್ನು ಬಲಪಡಿಸಲು ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸಲಿದೆ ಎಂದು ಮೂಲಗಳು ಹೇಳಿವೆ.

ಹೊಸ ಖಾತೆಯ ಸಚಿವರು ಯಾರೆಂಬುದು ಸಚಿವ ಸಂಪುಟ ಪುನಾರಚನೆ ವೇಳೆ ತಿಳಿಯುವ ನಿರೀಕ್ಷೆ ಇದೆ.

ಈ ಮಧ್ಯೆ, ‘ಸಹಕಾರದಿಂದ ಸಮೃದ್ಧಿ’ ಧ್ಯೇಯದೊಂದಿಗೆ ಸಹಕಾರ ಸಚಿವಾಲಯ ಸ್ಥಾಪಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಟ್ವೀಟ್ ಮಾಡಿದ್ದಾರೆ.

ಓದಿ: ಕೇಂದ್ರ ಸಂಪುಟ ಪುನಾರಚನೆ: ನೂತನ ಮಂತ್ರಿಗಳಾಗಿ ಮೋದಿ ಟೀಂ ಸೇರುವವರಾರು?

ಪ್ರಧಾನಿ ಮೋದಿ ಆವರು ಆರಂಭದಲ್ಲಿ ಜಲ ಶಕ್ತಿ ಸಚಿವಾಲಯವನ್ನು ರಚಿಸಿದರು ಮತ್ತು ಈಗ ಸಹಕಾರದ ಖಾತೆಯನ್ನು ರಚಿಸಿದ್ದಾರೆ. ಇದು ದೀರ್ಘಾವಧಿಯ ಆಡಳಿತದ ಆರ್ಥಿಕತೆಗೆ ಶಕ್ತಿಯನ್ನು ತುಂಬುತ್ತದೆ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು