ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಬ‌ಗ್ಗೆ ‘ಬೂಟಾಟಿಕೆ’ ಪ್ರದರ್ಶಿಸಿದ ಕಾಂಗ್ರೆಸ್: ಪ್ರಧಾನಿ ಮೋದಿ ಕಿಡಿ

Last Updated 7 ಆಗಸ್ಟ್ 2021, 11:42 IST
ಅಕ್ಷರ ಗಾತ್ರ

ಭೋಪಾಲ್: ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರಗಳು ಕಪಟತನದಲ್ಲಿ ತೊಡಗಿದ್ದವು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಆರೋಪಿಸಿದ್ದಾರೆ.

‘ಬಡವರು‘ಎಂಬ ಪದವನ್ನು ‘ಹಾಡಿ’ನಂತೆ ದಿನಕ್ಕೆ ನೂರು ಬಾರಿ ಪಠಿಸುತ್ತಿದ್ದರು. ಆದರೆ, ಬಡವರ ಕಲ್ಯಾಣ ಮಾಡಲಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮಧ್ಯಪ್ರದೇಶದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಫಲಾನುಭವಿಗಳ ಜೊತೆ ವಿಡಿಯೊ ಸಂವಾದದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ವ್ಯವಸ್ಥೆಯಲ್ಲಿ 'ವಿಕೃತಿ' ಇತ್ತು ಎಂದು ಟೀಕಿಸಿದ್ದಾರೆ.

ಈಗ ಸರ್ಕಾರದ ಕಾರ್ಯನಿರ್ವಹಣೆಯಲ್ಲಿನ ಬದಲಾವಣೆಯಿಂದಾಗಿ, ಯೋಜನೆಗಳು ಫಲಾನುಭವಿಗಳನ್ನು ತಲುಪುತ್ತಿವೆ ಎಂದು ಪ್ರತಿಪಾದಿಸಿದ ಮೋದಿ, ಉದ್ಯೋಗದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಗ್ಗಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ‘ಸರ್ಕಾರದ ಕಾರ್ಯ ಯೋಜನೆಯಲ್ಲಿ ಬದಲಾವಣೆಯಾದ ಕಾರಣ ಸರ್ಕಾರದ ಯೋಜನೆಗಳು ವೇಗವಾಗಿ ಜನರಿಗೆ ತಲುಪುತ್ತಿವೆ. ಹಿಂದಿನ ಸರ್ಕಾರದ ವ್ಯವಸ್ಥೆಯಲ್ಲಿ ವಿಕೃತಿ ಇತ್ತು. ಅವರು ಬಡವರ ಬಗ್ಗೆ ಪ್ರಶ್ನೆಗಳನ್ನು ಎತ್ತುತಿದ್ದರು ಮತ್ತು ಅವರೇ ಉತ್ತರ ಕೊಟ್ಟುಕೊಳ್ಳುತ್ತಿದ್ದರು’ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಹಿಂದಿನ ಸರ್ಕಾರಗಳು ಬಡವರು ಮತ್ತು ಗ್ರಾಮಗಳ ಜನರನ್ನು ರಸ್ತೆ, ವಿದ್ಯುತ್, ವಸತಿ, ಅಡುಗೆ ಇಂಧನ, ಬ್ಯಾಂಕಿಂಗ್ ಮುಂತಾದ ಮೂಲಭೂತ ಸೌಕರ್ಯಗಳಿಂದ ದೂರವಿರಿಸಿದ್ದವು ಎಂದು ಆರೋಪಿಸಿದ ಅವರು, ‘ಬಡತನ ಎಂಬ ಪದವನ್ನು ಒಂದು ಹಾಡಿನಂತೆ ದಿನಕ್ಕೆ ನೂರಾರು ಬಾರಿ ಪಠಿಸಿದರು. ಆದರೆ, ಬಡವರ ಕಲ್ಯಾಣದ ಬಗ್ಗೆ ಯೋಚಿಸಲಿಲ್ಲ. ಇಂತಹ ಕೃತ್ಯಗಳನ್ನು 'ಪಖಂಡ' (ಬೂಟಾಟಿಕೆ) ಎಂದು ಕರೆಯಲಾಗುತ್ತದೆ. ಅವರು ಬಡವರಿಗೆ ಸೌಲಭ್ಯಗಳನ್ನು ನೀಡಲಿಲ್ಲ. ಆದರೆ, ಸುಳ್ಳು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿದ್ದರು’ ಎಂದು ಟೀಕಿಸಿದ್ದಾರೆ.

ತಮ್ಮ ಸರ್ಕಾರದ ಕಾರ್ಯಕ್ರಮಗಳ ಕುರಿತು ಮಾತನಾಡುತ್ತಾ, ಪ್ರಸ್ತುತ ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ 80 ಕೋಟಿ ಭಾರತೀಯರು ಉಚಿತ ಪಡಿತರವನ್ನು ಪಡೆದರು ಮತ್ತು ಇದರಲ್ಲಿ ಮಧ್ಯಪ್ರದೇಶದ ಐದು ಕೋಟಿ ಜನರು ಸೇರಿದ್ದಾರೆ ಎಂದು ಹೇಳಿದರು. ಕಳೆದ 100 ವರ್ಷಗಳಲ್ಲಿ ಮಾನವ ಸಮಾಜ ಎದುರಿಸಿದ ಅತಿದೊಡ್ಡ ವಿಪತ್ತು ಕೊರೊನಾ ಸೋಂಕು ಎಂದು ಅವರು ವಿವರಿಸಿದರು. ವೈರಸ್ ಹರಡುವುದನ್ನು ತಪ್ಪಿಸಲು ಜನರು ಮಾಸ್ಕ್‌ಗಳನ್ನು ಧರಿಸುವುದು, ಕೈಗಳನ್ನು ಸ್ವಚ್ಛಗೊಳಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT