ಶುಕ್ರವಾರ, ಏಪ್ರಿಲ್ 16, 2021
28 °C
ಮುಖ್ಯಮಂತ್ರಿ ಬಘೇಲ್‌ ಜೊತೆ ಗೃಹ ಸಚಿವ ಶಾ ಚರ್ಚೆ

ನಕ್ಸಲ್‌ ದಾಳಿ: ಛತ್ತೀಸಗಡಕ್ಕೆ ಭೇಟಿ ನೀಡಲು ಸಿಆರ್‌ಪಿಎಫ್‌ ಡಿಜಿಗೆ ಸಿಎಂ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾವೋವಾದಿ ನಕ್ಸಲರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಐವರು ಯೋಧರು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರೊಂದಿಗೆ ಭಾನುವಾರ ಚರ್ಚೆ ನಡೆಸಿದರು.

ಛತ್ತೀಸಗಡಕ್ಕೆ ಭೇಟಿ ನೀಡಿ, ಪರಿಸ್ಥಿತಿಯ ಅವಲೋಕನ ಮಾಡುವಂತೆ ಸಿಆರ್‌ಪಿಎಫ್‌ ನ ಮಹಾ ನಿರ್ದೇಶಕ ಕುಲದೀಪ್ ಸಿಂಗ್‌ ಅವರಿಗೆ ಶಾ ನಿರ್ದೇಶನ ನೀಡಿದರು.

‘ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಘೇಲ್‌ ಅವರು ಗೃಹ ಸಚಿವ ಶಾ ಅವರಿಗೆ ವಿವರಿಸಿದರು’ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳ ಗಡಿಯಲ್ಲಿರುವ ಅರಣ್ಯದಲ್ಲಿ ಶನಿವಾರ ನಡೆದ ಎನ್‌ಕೌಂಟರ್‌ನಲ್ಲಿ ಸಿಆರ್‌ಪಿಎಫ್‌ನ ಐವರು ಯೋಧರು ಹುತಾತ್ಮರಾಗಿ, 30 ಹೆಚ್ಚು ಯೋಧರು ಗಾಯಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು