ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಬಳಿ 2 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯ: ಕೇಂದ್ರ

Last Updated 20 ಮೇ 2021, 12:59 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿಕ ಸುಮಾರು 2 ಕೋಟಿ ಡೋಸ್‌ಗಳಷ್ಟು ಕೋವಿಡ್‌–19 ಲಸಿಕೆ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 26 ಲಕ್ಷ ಡೋಸ್‌ಗಳಷ್ಟು ಲಸಿಕೆ ಪೂರೈಕೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.

'ಭಾರತ ಸರ್ಕಾರವು ಉಚಿತವಾಗಿ ಮತ್ತು ನೇರವಾಗಿ ಲಸಿಕೆ ಪೂರೈಕೆ ವ್ಯವಸ್ಥೆಯ ಅಡಿಯಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿ ಪ್ರದೇಶಗಳಿಗೆ 21 ಕೋಟಿಗೂ ಅಧಿಕ ಡೋಸ್‌ಗಳಷ್ಟು (21,07,31,130) ಕೋವಿಡ್‌ ಲಸಿಕೆ ಒದಗಿಸಿದೆ. ಈ ಪೈಕಿ, ವ್ಯರ್ಥವಾಗಿರುವ ಡೋಸ್‌ಗಳ ಸಹಿತ ಒಟ್ಟು 19,09,60,575 ಡೋಸ್‌ಗಳಷ್ಟು ಲಸಿಕೆ ಬಳಕೆಯಾಗಿದೆ (ಗುರುವಾರ ಬೆಳಿಗ್ಗೆ 8ರ ವರೆಗೂ)' ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

'ಸುಮಾರು 2 ಕೋಟಿ ಡೋಸ್‌ಗಳಷ್ಟು (1,97,70,555) ಲಸಿಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯವಿದೆ. ಇದರೊಂದಿಗೆ ಮುಂದಿನ ಮೂರು ದಿನಗಳಲ್ಲಿ 25,98,760 ಡೋಸ್‌ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವೀಕರಿಸಲಿವೆ' ಎಂದಿದೆ.

ದೇಶದಲ್ಲಿ ಕೊರೊನಾ ವೈರಸ್‌ ಸಾಂಕ್ರಾಮಿಕ ತಡೆಗಟ್ಟಲು ಪರೀಕ್ಷೆಗಳನ್ನು ನಡೆಸುವುದು, ಚಿಕಿತ್ಸೆ, ಸೋಂಕಿತರ ಸಂಪರ್ಕ ಪತ್ತೆ ಹಾಗೂ ಕೋವಿಡ್‌–19 ನಿಯಮಗಳ ಪಾಲನೆ ಜೊತೆಗೆ ಲಸಿಕೆ ಹಾಕುವುದಕ್ಕೆ ಸರ್ಕಾರ ಒತ್ತು ನೀಡುತ್ತಿದೆ. ಲಸಿಕೆ ಅಭಿಯಾನದ ಅಡಿಯಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಉಚಿತವಾಗಿ ಲಸಿಕೆ ಪೂರೈಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT