ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು: ಮೀರಾ ಕುಮಾರ್‌

Last Updated 21 ಆಗಸ್ಟ್ 2022, 14:09 IST
ಅಕ್ಷರ ಗಾತ್ರ

ನವದೆಹಲಿ: ‘ಜಾತಿ ಪದ್ಧತಿಯಂತಹ ಅನಾರೋಗ್ಯಕರ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು. ಹಾಗೂ ಪೂರ್ವಾಗ್ರಹದ ವಿರುದ್ಧ ಶೂನ್ಯ ಸಹಿಷ್ಣುತೆ ವಿಧಾನವನ್ನು ಅಳವಡಿಸಿಕೊಳ್ಳಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಮೀರಾ ಕುಮಾರ್ ಹೇಳಿದರು.

ರಾಜಸ್ಥಾನದಲ್ಲಿ ಶಿಕ್ಷಕನೊಬ್ಬನ ಥಳಿತಕ್ಕೆ ಒಳಗಾಗಿ ದಲಿತ ಶಾಲಾ ಬಾಲಕನೊಬ್ಬ ಸಾವನ್ನಪ್ಪಿದ ಘಟನೆಯ ಕೋಲಾಹಲದ ಬೆನ್ನಲ್ಲಿಯೇ ಈ ಹೇಳಿಕೆ ನೀಡಿರುವ ಮೀರಾ ಅವರು, ‘ಜಾತಿಯ ಆಧಾರದ ದೌರ್ಜನ್ಯಗಳಿಗೆ ಜವಾಬ್ದಾರಿಯಾಗಿರುವ ನಿರ್ದಿಷ್ಟ ಆಡಳಿತ ಅಥವಾ ರಾಜಕೀಯ ಪಕ್ಷಕ್ಕೆಯಾರೂ ಸೇರಬಾರದು. ಏಕೆಂದರೆ ಈ ಪ್ರಕ್ರಿಯೆಯು, ಜಾತಿಯನ್ನು ನಿರ್ಮೂಲನೆ ಮಾಡಬೇಕು ಎಂಬ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಹಲವು ವರ್ಷಗಳಿಂದಲೂ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲಾಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT