ಭಾನುವಾರ, ಜುಲೈ 3, 2022
28 °C

ಪಿಜಿ ನೀಟ್‌: ದಂತ ವೈದ್ಯಕೀಯ ಕೋರ್ಸ್‌ ಸೀಟು ಹಂಚಿಕೆ 31ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2021ನೇ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಪ್ರವೇಶಕ್ಕಾಗಿ ‘ಮಾಪ್ಅಪ್‌’ ಸುತ್ತಿನ ಸೀಟು ಹಂಚಿಕೆ ಜ.31ರಂದು ನಡೆಯಲಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೇಳಾಪಟ್ಟಿ ಪ್ರಕಟಿಸಿದೆ.

ಈಗಾಗಲೇ ದಾಖಲಾತಿ ಪರಿಶೀಲನೆ ಮಾಡಿಕೊಂಡು ಸೀಟು ಹಂಚಿಕೆಯಾಗದೇ ಇರುವ ಅಭ್ಯರ್ಥಿಗಳು ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಹಾಜರಾಗಬಹುದು ಎಂದು ಕೆಇಎ ತಿಳಿಸಿದೆ.

ಮಾಪ್‌ ಅಪ್‌ ಸುತ್ತಿನಲ್ಲಿ ಸೀಟುಗಳು ಮುಗಿದರೆ ಕೌನ್ಸೆಲಿಂಗ್‌ ಸ್ಥಗಿತಗೊಳಿಸಲಾಗುವುದು. ಮಾಪ್‌ಅಪ್‌ ಸುತ್ತಿಗೆ ಮೊದಲು ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಸೀಟುಗಳ ಲಭ್ಯತೆ ಪರಿಶೀಲಿಸಬೇಕು ಎಂದು ಕೆಇಎ ಸೂಚಿಸಿದೆ.

 ವಿವರವಾದ ಮಾಹಿತಿಗೆ: http://kea.kar.nic.in ವೀಕ್ಷಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು