ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 29 ಜನರಲ್ಲಿ ರೂಪಾಂತರಗೊಂಡ ವೈರಾಣು ಪತ್ತೆ

Last Updated 1 ಜನವರಿ 2021, 16:01 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಟನ್‌ನಲ್ಲಿ ಮೊದಲ ಬಾರಿ ಪತ್ತೆಯಾದ ರೂಪಾಂತರಗೊಂಡ ಕೊರೊನಾ ವೈರಾಣು, ಇಲ್ಲಿಯವರೆಗೂ ಭಾರತದಲ್ಲಿ 29 ಜನರಲ್ಲಿ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಗುರುವಾರದವರೆಗೆ 25 ಜನರಲ್ಲಿ ಈ ವೈರಾಣು ಇರುವುದು ದೃಢಪಟ್ಟಿತ್ತು. ಸೋಂಕಿತರ ಜೊತೆ ಪ್ರಯಾಣಿಸಿದವರು ಹಾಗೂ ಅವರ ಜೊತೆಗೆ ಸಂಪರ್ಕದಲ್ಲಿದ್ದವರ ಪತ್ತೆಕಾರ್ಯಕ್ಕೆ ಚುರುಕು ನೀಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ. ಡೆನ್ಮಾರ್ಕ್‌, ನೆದರ್‌ಲ್ಯಾಂಡ್‌, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್‌, ಫ್ರಾನ್ಸ್‌, ಸ್ಪೇನ್‌, ಜರ್ಮನಿ, ಜಪಾನ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರೂಪಾಂತರಗೊಂಡ ವೈರಾಣು ಪತ್ತೆಯಾಗಿದೆ.

ಡಿ.9ರಿಂದ ಡಿ.22ರವರೆಗೆ ಭಾರತಕ್ಕೆ ಆಗಮಿಸಿದವರಲ್ಲಿ, ಸೋಂಕಿನ ಲಕ್ಷಣವಿರುವವರಿಗೆ ಹಾಗೂ ಸೋಂಕು ದೃಢಪಟ್ಟವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಿ,ರೂಪಾಂತರಗೊಂಡ ವೈರಾಣು ಇದೆಯೇ ಎನ್ನುವುದನ್ನು ಪತ್ತೆಹಚ್ಚಲು ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT