ಬುಧವಾರ, ಜನವರಿ 27, 2021
16 °C

ಫಾಸ್ಟ್ಯಾಗ್‌ ಆ್ಯಪ್‌ನಲ್ಲಿ ಹೊಸ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಫಾಸ್ಟ್ಯಾಗ್ ಆ್ಯಪ್‌ಅನ್ನು ಮೇಲ್ದರ್ಜೆಗೇರಿಸಿದೆ. ‘ಮೈ ಫಾಸ್ಟ್ಯಾಗ್ ಆ್ಯ‍ಪ್’ನಲ್ಲಿ ಟ್ಯಾಗ್‌ನ ‘ಬ್ಯಾಲೆನ್ಸ್ ಸ್ಟೇಟಸ್’ ಪರಿಶೀಲನೆ ಮಾಡುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿದೆ. ಆ್ಯಪ್‌ನಲ್ಲಿ ವಾಹನದ ಸಂಖ್ಯೆಯನ್ನು ನಮೂದಿಸಿದರೆ, ಟ್ಯಾಗ್‌ ಯಾವ ಸ್ಥಿತಿಯಲ್ಲಿದೆ (ಸಕ್ರಿಯ/ನಿಷ್ಕ್ರಯ), ಉಳಿಕೆ ಮೊತ್ತ ಎಷ್ಟು (ಬ್ಯಾಲೆನ್ಸ್‌) ಎಂಬುದು ತಿಳಿಯಲಿದೆ.

2021ರ ಜನವರಿ 1ರಿಂದ ದೇಶದಾದ್ಯಂತ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಹೆದ್ದಾರಿಗಳಲ್ಲಿ ಡಿಜಿಟಲ್ ರೂಪದಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಆ್ಯಪ್‌ನಲ್ಲಿ ಹೊಸ ಆಯ್ಕೆಗಳನ್ನು ನೀಡಲಾಗಿದೆ.

ವಾಹನ ಬಳಕೆದಾರರು ಹಾಗೂ ಟೋಲ್‌ ನಿರ್ವಹಿಸುವವರು ಇಬ್ಬರಿಗೂ ಫಾಸ್ಟ್ಯಾಗ್‌ ಆ್ಯಪ್‌ ಪರಿಷ್ಕರಣೆಯಿಂದ ನೆರವಾಗಲಿದೆ. ವಾಹನವು ಟೋಲ್‌ ಮೂಲಕ ಸಾಗುವ ಮುನ್ನ, ಟ್ಯಾಗ್ ಬ್ಯಾಲೆನ್ಸ್‌ನಲ್ಲಿನ ಸಮಸ್ಯೆಯನ್ನು ನಿವಾರಿಸಲು ಅನುಕೂಲವಾಗುತ್ತದೆ.

ಟ್ಯಾಗ್‌ನ ಖಾತೆಯಲ್ಲಿ ಹಣವಿಲ್ಲದೆ ಅಥವಾ ಕಡಿಮೆ ಹಣವಿದ್ದು, ಅದು ಕಪ್ಪುಪಟ್ಟಿಗೆ ಸೇರಿದ್ದರೆ, ಅದನ್ನು ಸರಿಪಡಿಸಲು ತೆಗೆದುಕೊಳ್ಳುವ ‘ರಿಫ್ರೆಶ್’ ಸಮಯವನ್ನು 10 ನಿಮಿಷದಿಂದ 3 ನಿಮಿಷಕ್ಕೆ ಇಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು