ಕೇರಳ: ಕಸದ ರಾಶಿಯಿಂದ ನವಜಾತ ಶಿಶುವಿನ ರಕ್ಷಣೆ

ಕೊಲ್ಲಂ (ಕೇರಳ): ದಕ್ಷಿಣ ಕೇರಳದ ನಡಕ್ಕಲ್ನ ಕಸದ ರಾಶಿಯೊಂದರಿಂದ ನವಜಾತ ಶಿಶುವನ್ನು ಮಂಗಳವಾರ ರಕ್ಷಿಸಲಾಗಿದೆ.
ಮನೆಯೊಂದರ ಹಿಂದೆಯಿದ್ದ ಕಸದ ರಾಶಿಯಲ್ಲಿ ಒಂದು ದಿನದ ಗಂಡು ಶಿಶುವನ್ನು ಅಪರಿಚಿತರು ಬಿಟ್ಟುಹೋಗಿದ್ದರು. ಮಂಗಳವಾರ ಬೆಳಿಗ್ಗೆ ಮಗುವಿನ ಆಕ್ರಂದನ ಕೇಳಿದ ಸ್ಥಳೀಯರು, ಮಗುವನ್ನು ಕಸದ ರಾಶಿಯಿಂದ ರಕ್ಷಿಸಿದ್ದಾರೆ. ಈ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು, ನವಜಾತ ಶಿಶುವನ್ನು ಪಾರಿಪಳ್ಳಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದರು ಎಂದು ಮೂಲಗಳು ಹೇಳಿವೆ.
‘ಶಿಶು ಆರೋಗ್ಯವಾಗಿದ್ದು, ಮೂರು ಕೆ.ಜಿ ತೂಕ ಹೊಂದಿದೆ. ಹಸುಳೆಯನ್ನು ಕಸದ ರಾಶಿಯಲ್ಲಿ ಬಿಟ್ಟುಹೋದವರು ಯಾರೆಂದು ಗೊತ್ತಾಗಿಲ್ಲ. ನಾವು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದೇವೆ. ಆದಷ್ಟು ಬೇಗ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರ ಮಾಡುತ್ತೇವೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.