ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ಐಸಿಸ್ ಪೋಸ್ಟ್; ಎನ್ಐಎ ಶೋಧ

ತಮಿಳುನಾಡು
Last Updated 16 ಮೇ 2021, 15:16 IST
ಅಕ್ಷರ ಗಾತ್ರ

ಚೆನ್ನೈ: ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ ಹಾಗೂ ಹಿಜ್ಬ್ ಉಲ್ ತಹ್ರಿರ್ ಮೂಲಭೂತವಾದಿ ಸಂಘಟನೆಯ ಸಿದ್ಧಾಂತವನ್ನು ಪ್ರತಿಪಾದಿಸುವ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಭಾನುವಾರ ತಮಿಳುನಾಡಿನ ಮದುರೈ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮದುರೈ ಜಿಲ್ಲೆಯ ಕಾಜಿಮಾರ್ ಸ್ಟ್ರೀಟ್, ಕೆ. ಪುದರ್, ಪೆಥಾನಿಯಪುರಂ ಮತ್ತು ಮೆಹಬೂಬ್ ಪಾಳಯಂ ಎಂಬಲ್ಲಿ ಶೋಧ ನಡೆಸಲಾಗಿದೆ.

ಶೋಧ ಕಾರ್ಯಾಚರಣೆಯ ವೇಳೆಯಲ್ಲಿ ಲ್ಯಾಪ್‌ಟ್ಯಾಪ್, ಹಾರ್ಡ್ ಡಿಸ್ಕ್‌ಗಳು, ಮೊಬೈಲ್ ಫೋನ್‌ಗಳು, ಮೆಮೊರಿ ಕಾರ್ಡ್‌ಗಳು, ಸಿಮ್, ಪೆನ್‌ ಡ್ರೈವ್‌ಗಳು ಆಕ್ಷೇಪಾರ್ಹ ಕರಪತ್ರ, ಪುಸ್ತಕಗಳು ಸೇರಿದಂತೆ 16 ಡಿಜಿಟಲ್ ಸಾಧನಗಳು ದೊರಕಿವೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

‘ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುರೈ ನಿವಾಸಿ, ಉಗ್ರಗಾಮಿ ಮೊಹಮ್ಮದ್ ಇಕ್ಬಾಲ್ ಎಂಬಾತನನ್ನು ಬಂಧಿಸಲಾಗಿತ್ತು. ಈತನಿಗೆ ಸಂಬಂಧಿಸಿದ ಕೆಲವು ದೋಷಾರೋಪಣೆಯ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರಕರಣಕ್ಕೂ ಇದು ಸಂಬಂಧ ಹೊಂದಿದೆ’ ಎಂದು ಅವರು ಹೇಳಿದ್ದಾರೆ.

‘ಪೋಸ್ಟ್‌ಗಳಲ್ಲಿ ಇಕ್ಬಾಲ್ ಐಎಸ್‌ಐಎಸ್ ಉಗ್ರ ಸಂಘಟನೆಯ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾನೆ’ ಎಂದೂ ಎನ್‌ಐಎ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದೆ.

‘ಥೂಂಗಾ ವಿಜಿಗಲ್ ರೆಂಡು ಈಸ್ ಇನ್ ಕಾಜಿಮಾರ್ ಸ್ಟ್ರೀಟ್‌’ ಹೆಸರಿನ ಫೇಸ್‌ಬುಕ್‌ ಪುಟದಲ್ಲಿ ನಿರ್ದಿಷ್ಟ ಸಮುದಾಯವನ್ನು ಕೆಣಕುವಂಥ ಪೋಸ್ಟ್‌ಗಳನ್ನು ಇಕ್ಬಾಲ್ ಅಪ್‌ಲೋಡ್ ಮಾಡಿದ್ದಾರೆ. ಈ ಫೇಸ್‌ಬುಕ್ ಪುಟವು ವಿವಿಧ ಧಾರ್ಮಿಕ ಗುಂಪುಗಳ ನಡುವೆ ಕೋಮು ಅಸಮಾನತೆಯನ್ನು ಪ್ರಚೋದಿಸುವ ಕಾರಣಕ್ಕಾಗಿಯೇ ವಿನ್ಯಾಸಗೊಳಿಸಲಾಗಿದೆ’ ಎಂದೂ ಅಧಿಕಾರಿಯು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT