ಮಂಗಳವಾರ, ನವೆಂಬರ್ 24, 2020
22 °C
ಭಯೋತ್ಪಾದಕ ಕೃತ್ಯಕ್ಕೆ ಧನ ಸಹಾಯ ಪ್ರಕರಣ

ಜಮ್ಮು–ಕಾಶ್ಮೀರ, ದೆಹಲಿಯ 6 ಎನ್‌ಜಿಒ, ಟ್ರಸ್ಟ್‌ ಮೇಲೆ ಎನ್‌ಐಎ ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ದತ್ತಿ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದ ದೇಣಿಗೆ ರೂಪದ ಹಣವನ್ನು ‘ಪ್ರತ್ಯೇಕತವಾದಿ ಚಟುವಟಿಕೆ‘ಗಳಿಗೆ ಬಳಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿಯಲ್ಲಿರುವ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಮತ್ತು ಟ್ರಸ್ಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯ ಹಾಗೂ ದೆಹಲಿಯಲ್ಲಿರುವ ಆರು ಎನ್‌ಜಿಒ ಮತ್ತು ಟ್ರಸ್ಟ್‌ಗಳ ಮೇಲೆ ದಾಳಿ ನಡೆಸಿರುವ  ಅಧಿಕಾರಿಗಳು, ಹಲವು ಅಪಾದನೆಗೆ ಗುರಿಯಾಗುವಂತಹ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

ದೆಹಲಿಯ ಚಾರಿಟಿ ಅಲಯನ್ಸ್‌, ಫಾಲಹ್‌ ಇ–ಆಮ್‌ ಟ್ರಸ್ಟ್‌, ಹ್ಯೂಮನ್ ವೆಲ್‌ಫೇರ್‌ ಫೌಂಡೇಷನ್‌, ಜೆಕೆ ಯತೀಮ್ ಫೌಂಡೇಷನ್‌, ಸಾಲ್ವೇಷನ್ ಮೂವ್‌ಮೆಂಟ್‌ ಮತ್ತು ಜೆಕೆ ವಾಯ್ಸ್‌ ಆಫ್ ವಿಕ್ಟಿಮ್ಸ್‌ ಸಂಸ್ಥೆಗಳಲ್ಲಿ ಎನ್‌ಐಎ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕೆಲವು ಎನ್‌ಜಿಒಗಳು ದೇಶ ಮತ್ತು ವಿದೇಶಗಳಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿದ ಮತ್ತು ವ್ಯಾಪಾರದ ಪಾಲುದಾರಿಕೆಯ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಉಪಯೋಗಿಸುತ್ತಿವೆ ಎಂಬ ವಿಶ್ವಾರ್ಹ ಮಾಹಿತಿಯ ಹಿನ್ನೆಲೆಯಲ್ಲಿ ಅಕ್ಟೋಬರ್ 8ರಂದು ಐಪಿಸಿ ಸೆಕ್ಷನ್‌ ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಅಡಿಯಲ್ಲಿ ದೂರು ದಾಖಲಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು