ಬುಧವಾರ, ಜೂನ್ 16, 2021
22 °C

ಯುರೇನಿಯಂ ಜಪ್ತಿ ಪ್ರಕರಣ: ಎನ್‌ಐಎಗೆ ತನಿಖೆ ಹೊಣೆ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಮುಂಬೈನಲ್ಲಿ ಈಚೆಗೆ ಜಪ್ತಿ ಮಾಡಿದ್ದ ₹ 21 ಕೋಟಿ ಮೌಲ್ಯದ ಪ್ರಾಕೃತಿಕ ಯುರೇನಿಯಂ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದೆ’ ಎಂದು ಅದರ ವಕ್ತಾರರು ಭಾನುವಾರ ತಿಳಿಸಿದರು.

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಘಟಕ (ಎಟಿಎಸ್‌) ಅಧಿಕಾರಿಗಳು ಮೇ 5ರ ರಾತ್ರಿ ಜಿಗರ್‌ ಜಯೇಶ್‌ ಪಾಂಡ್ಯ ಮತ್ತು ಅಬು ತಾಹಿರ್‌ ಅಫ್ಜಲ್‌ ಚೌಧರಿ ಅವರನ್ನು ಬಂಧಿಸಿ, ₹ 21 ಕೋಟಿ ಮೌಲ್ಯದ 7.1 ಕೆ.ಜಿ ಯುರೇನಿಯಂ ಜಪ್ತಿ ಮಾಡಿದ್ದರು.

ಎನ್ಐಎ ವಕ್ತಾರರ ಪ್ರಕಾರ, ಈ ಮೊದಲು ಎಟಿ‌ಎಸ್‌ ಕಾಲಾಚೌಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಕೇಂದ್ರ ಗೃಹ ಸಚಿವಾಲಯದ ಆದೇಶದ ಅನುಸಾರ ಎನ್‌ಐಎ ಈ ಬಗ್ಗೆ ಹೊಸದಾಗಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು