ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಲ್ಲಿ ರಾತ್ರಿ ವೇಳೆ ಎಲೆಕ್ಟ್ರಾನಿಕ್ ಡಿವೈಸ್ ಚಾರ್ಜಿಂಗ್‌ಗೆ ನಿರ್ಬಂಧ:ರೈಲ್ವೆ

Last Updated 31 ಮಾರ್ಚ್ 2021, 3:22 IST
ಅಕ್ಷರ ಗಾತ್ರ

ನವದೆಹಲಿ: ಬೆಂಕಿ ಆಕಸ್ಮಿಕ ಘಟನೆಯನ್ನು ತಡೆಯುವುದು ಮತ್ತು ಮುನ್ನೆಚ್ಚರಿಕೆಯ ಕ್ರಮವಾಗಿ ರಾತ್ರಿ 11ರಿಂದ ಮುಂಜಾನೆ 5ರ ವರೆಗೆ ರೈಲಿನಲ್ಲಿ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ಚಾರ್ಜಿಂಗ್ ಅನ್ನು ನಿರ್ಬಂಧಿಸಲಾಗಿದೆ ಎಂದು ಭಾರತೀಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ರೈಲು ಪ್ರಯಾಣದ ವೇಳೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಚಾರ್ಜಿಂಗ್ ಜಾಸ್ತಿಯಾದ ಪರಿಣಾಮ ಡಿವೈಸ್ ಬಿಸಿಯಾಗಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿರುವ ಅನೇಕ ಘಟನೆಗಳು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಪಶ್ಚಿಮ ರೈಲ್ವೆ ವಿಭಾಗವು ಮಾರ್ಚ್ 16ರಿಂದಲೇ ಇದನ್ನು ಕಾರ್ಯರೂಪಕ್ಕೆ ತಂದಿದ್ದು, ರಾತ್ರಿ ವೇಳೆಯಲ್ಲಿ ಚಲಿಸುತ್ತಿರುವ ರೈಲ್ವೆನಲ್ಲಿ ಚಾರ್ಜಿಂಗ್ ಅನ್ನು ನಿರ್ಬಂಧಿಸಲಾಗಿದೆ.

ಎಲ್ಲ ರೈಲ್ವೆಗಳಿಗೆ ರೈಲ್ವೆ ಮಂಡಳಿ ಸೂಚನೆ ರವಾನಿಸಿದೆ. ಇದರಂತೆ ಮಾರ್ಚ್ 16ರಿಂದಲೇ ಜಾರಿಗೊಳಿಸಿದ್ದೇವೆ ಎಂದು ಪಶ್ಚಿಮ ರೈಲ್ವೆಯ ಸಿಆರ್‌ಪಿಒ ಸುಮಿತ್ ಠಾಕೂರ್ ತಿಳಿಸಿದ್ದಾರೆ.

ಈ ಸೂಚನೆಗಳು ಹೊಸದೇನಲ್ಲ. ರೈಲ್ವೆ ಮಂಡಳಿಯ ಹಿಂದಿನ ಆದೇಶಗಳನ್ನು ಪುನರ್ ಉಲ್ಲೇಖಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಸಿಪಿಆರ್‌ಒ ಬಿ ಗುಣನೇಸನ್ ತಿಳಿಸಿದ್ದಾರೆ.

ಬೆಂಗಳೂರು-ಹಜೂರ್ ಸಾಹೀಬ್ ನಾಂದೇಡ್ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದ ಬಳಿಕ ರಾತ್ರಿ ವೇಳೆಯಲ್ಲಿ 11ರಿಂದ ಬೆಳಗ್ಗೆ 5ರ ವರೆಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ವಿಚ್ ಆಫ್ ಮಾಡಲು 2014ರಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಶಿಫಾರಸು ಮಾಡಿದ್ದರು. ಕ್ರಮೇಣ ಈ ಆದೇಶವನ್ನು ಎಲ್ಲ ವಲಯಗಳಿಗೂ ಹೊರಡಿಸಲಾಗಿತ್ತು.

ಇತ್ತೀಚಿನ ಬೆಂಕಿ ಆಕಸ್ಮಿಕ ಘಟನೆಗಳ ಹಿನ್ನೆಲೆಯಲ್ಲಿ ನಾವು ಅಗತ್ಯ ಕ್ರಮವನ್ನು ಕೈಗೊಂಡಿದ್ದೇವೆ. ಇದು ಮುನ್ನೆಚ್ಚರಿಕೆಯ ಕ್ರಮವಾಗಿದ್ದು, ಇದಕ್ಕೂ ಮೊದಲು ರೈಲ್ವೆ ಮಂಡಳಿಯು ಇಂತಹ ಆದೇಶಗಳನ್ನು ಹೊರಡಿಸಿತ್ತು. ರಾತ್ರಿ 11ರಿಂದ ಬೆಳಗ್ಗೆ 5ರ ವರೆಗೆ ಮೇನ್ ಸ್ವಿಚ್ ಬೋರ್ಡ್‌ನಿಂದ ಪವರ್ ಆಫ್ ಮಾಡಿಡಲಾಗುತ್ತದೆ ಎಂದು ಗುಣನೇಸನ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT