ಶನಿವಾರ, ಏಪ್ರಿಲ್ 17, 2021
23 °C

ವಾಯುಮಾಲೀನ್ಯವೇ ಸಾವು, ರೋಗಕ್ಕೆ ನೇರ ಕಾರಣವೆನ್ನಲಾಗದು: ಆರೋಗ್ಯ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಸಾವು ಮತ್ತು ಹಲವು ರೋಗಗಳಿಗೆ ವಾಯುಮಾಲಿನ್ಯವೇ ನೇರ ಕಾರಣವೆಂದು ನಿರ್ಧರಿಸಲು ನಿರ್ಣಾಯಕವಾದ ದತ್ತಾಂಶಗಳಿಲ್ಲ’ ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಚೌಬೆ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು.

2019ರ ಕೊನೆಯ ಮೂರು ತಿಂಗಳಲ್ಲಿ ಆಸ್ತಮಾ ರೋಗಿಗಳು, ಮಕ್ಕಳ ಶ್ವಾಸಕೋಶ ಮತ್ತು ಗರ್ಭಿಣಿ ಮಹಿಳೆಯರ ಮೇಲೆ ವಾಯು ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಯಾವುದಾದರೂ ಅಧ್ಯಯನ ಕೈಗೊಂಡಿದೆಯೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

ಆಹಾರ ಪದ್ಧತಿ, ಉದ್ಯೋಗ, ಸಾಮಾಜಿಕ-ಆರ್ಥಿಕ ಸ್ಥಿತಿ, ವೈದ್ಯಕೀಯ ಇತಿಹಾಸ, ಪ್ರತಿರೋಧಕ ಶಕ್ತಿ, ಅನುವಂಶಿಕತೆ ಹಾಗೂ  ಪರಿಸರ ಸೇರಿ ಹಲವು ಅಂಶಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಉಸಿರಾಟ ಸಂಬಂಧಿ ಕಾಯಿಲೆಗಳ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಲ್ಲಿ ವಾಯುಮಾಲಿನ್ಯವೂ ಒಂದು ಎಂದು ಚೌಬೆ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು