ಮಂಗಳವಾರ, ಜನವರಿ 25, 2022
24 °C

ಕೋವಿಡ್ ಲಸಿಕೆಯ ಬೂಸ್ಟರ್‌ ಡೋಸ್‌: ಮೂಡದ ಸಹಮತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಕ್ಕಳಿಗೆ ಲಸಿಕೆ ಮತ್ತು ಕೋವಿಡ್‌ ರೋಗಿಗಳಿಗೆ ಬೂಸ್ಟರ್ ಡೋಸ್‌ ನೀಡುವ ಕುರಿತು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ಸೋಮವಾರದ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಬೂಸ್ಟರ್ ಡೋಸ್‌ ಕುರಿತು ಸಮರ್ಥನೆಯಾಗಿ ಯಾವುದೇ ವೈಜ್ಞಾನಿಕ ಅಧ್ಯಯನ ಇಲ್ಲದಿರುವುದು ಈ ನಿರ್ಧಾರಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಭಾರತೀಯ ವೈದ್ಯಕೀಯ ಸಂಘವು ಆರೋಗ್ಯ ಕಾರ್ಯಕರ್ತರಿಗೆ ಹೆಚ್ಡುವರಿಯಾಗಿ ಒಂದು ಡೋಸ್‌ ಲಸಿಕೆ ನೀಡಬೇಕು ಎಂದು ಸರ್ಕಾರರವನ್ನು ಆಗ್ರಹಪಡಿಸಿದೆ.

ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಮೂಲಗಳ
ಪ್ರಕಾರ, ಬೂಸ್ಟರ್ ಡೋಸ್‌ ಸಮರ್ಥನೆಯಾಗಿ ವೈಜ್ಞಾನಿಕ ಅಧ್ಯಯನ ಇಲ್ಲದಿರುವುದು ಹಾಗೂ ಈ ಸಂಬಂಧ ಸಹಮತ ಮೂಡದ ಕಾರಣ ಶಿಫಾರಸು ಮಾಡಿಲ್ಲ.

ವೈಜ್ಞಾನಿಕ ಶಿಫಾರಸು ಆಧರಿಸಿ ಮಕ್ಕಳಿಗೆ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದು ಕೊಳ್ಳಲಿದೆ ಎಂದು ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಕಳೆದ ವಾರ ಲೋಕಸಭೆಯಲ್ಲಿ
ತಿಳಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು