ಮಂಗಳವಾರ, ಜೂನ್ 28, 2022
20 °C

ಕೋವಿಡ್‌: ವಿದೇಶಿ ಲಸಿಕೆಗಳಿಗೆ ಪೂರ್ವ ಪರೀಕ್ಷೆಗಳಿಂದ ವಿನಾಯಿತಿ– ಡಿಸಿಜಿಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿದೇಶಗಳು ತಯಾರಿಸಿದ ಕೋವಿಡ್‌ ಲಸಿಕೆಗಳ ಪ್ರತಿ ಬ್ಯಾಚ್‌ ಅನ್ನು ಕಸೌಲಿಯ ಕೇಂದ್ರ ಔಷಧ ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮತ್ತು ಅವುಗಳ ಬಿಡುಗಡೆಗೂ ಮುನ್ನ ನಡೆಸಬೇಕಿದ್ದ ಪ್ರಯೋಗಗಳಿಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಸಂಸ್ಥೆ ವಿನಾಯಿತಿ ನೀಡಿದೆ. ಇದು ದೇಶದಲ್ಲಿ ಲಸಿಕೆಗಳ ಲಭ್ಯತೆಯ ಪ್ರಮಾಣವನ್ನು ಹೆಚ್ಚಿಸಲು ನೆರವಾಗಲಿದೆ.

ವಿದೇಶಿ ಲಸಿಕೆಗಳನ್ನು ಪೂರೈಸುವ ಮಾತುಕತೆ ವೇಳೆ ಫೈಜರ್‌ ಮತ್ತು ಸಿಪ್ಲಾ ಕಂಪನಿಗಳು ಈ ಕುರಿತು ಬೇಡಿಕೆಗಳನ್ನು ಇಟ್ಟಿದ್ದವು. ಈ ಹಿನ್ನೆಲೆಯಲ್ಲಿ ಡಿಸಿಜಿಐ ಈ ನಿರ್ಧಾರ ಪ್ರಕಟಿಸಿದೆ.

‘ದೇಶದಲ್ಲಿ ಕೋವಿಡ್‌ ವ್ಯಾಪಕವಾಗಿ ಪಸರಿಸುತ್ತಿದೆ. ಈ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಲಸಿಕೆಗಳ ಅವಶ್ಯಕತೆಗಳಿರುವ ಕಾರಣ ಆಮದು ಮಾಡಿಕೊಳ್ಳುವ ಲಸಿಕೆಗಳಿಗೆ ಈ ವಿನಾಯಿತಿ ನೀಡಲಾಗಿದೆ’ ಎಂದು ಡಿಸಿಜಿಐ ಹೇಳಿದೆ.

‘ತುರ್ತು ಸ್ಥಿತಿ ಸಂದರ್ಭದಲ್ಲಿ ನಿರ್ಬಂಧಿತ ಬಳಕೆಗಾಗಿ ಭಾರತದಲ್ಲಿ ಕೋವಿಡ್‌ ಲಸಿಕೆಗಳನ್ನು ಅನುಮೋದಿಸಲಾಗಿದೆ. ಇದೇ ರೀತಿ ಈಗಾಗಲೇ ಅಮೆರಿಕದ ಎಫ್‌ಡಿಎ, ಇಎಂಎ, ಯುಕೆ ಎಂಎಚ್‌ಆರ್‌ಎ, ಪಿಎಂಆರ್‌ಡಿ ಜಪಾನ್‌ನಲ್ಲಿ ನಿರ್ಬಂಧಿತ ಬಳಕೆಗೆ ಅನುಮೋದನೆ ದೊರೆತಿರುವ ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ ಇರುವ ಲಸಿಕೆಗಳಿಗೆ ಈ ವಿನಾಯಿತಿ ನೀಡಲಾಗಿದೆ‘ ಎಂದು ಅದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು