ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತಗಳ ವರದಿ 2021: ಸೀಟ್ ಬೆಲ್ಟ್ ಧರಿಸದೇ ಸತ್ತವರು 16,397 ಜನ!

Last Updated 29 ಡಿಸೆಂಬರ್ 2022, 9:43 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 2021 ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ16,397 ಜನ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ವರದಿ ತಿಳಿಸಿದೆ.

ಮೃತರಲ್ಲಿ8,438 ಚಾಲಕರು,7,959 ಜನ ಪ್ರಯಾಣಿಕರು ಎಂದು ತಿಳಿದು ಬಂದಿದೆ.

ಇದೇ ವೇಳೆ ಹೆಲ್ಮೆಟ್ ಧರಿಸದ ಕಾರಣಕ್ಕೆ 46,593 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ 32,877 ಜನ ಸವಾರರಾದರೆ,13,716 ಜನ ಪ್ರಯಾಣಿಕರು ಎಂದು ವರದಿ ತಿಳಿಸಿದೆ.

ಇನ್ನೊಂದು ಆಘಾತಕಾರಿ ಅಂಶವೆಂದರೆ, 2021 ರಲ್ಲಿ ಒಟ್ಟು4,12,432 ರಸ್ತೆ ಅಪಘಾತಗಳು ನಡೆದು1,53,972 ಜನ ಪ್ರಾಣ ಕಳೆದುಕೊಂಡಿದ್ದಾರೆ.3,84,448 ಜನ ಗಾಯಗೊಂಡಿದ್ದಾರೆ.

ಸೀಟ್ ಬೆಲ್ಟ್‌ ಧರಿಸದ ಅಪಘಾತಗಳಲ್ಲಿ39,231 ಜನ ಗಾಯಗೊಂಡಿದ್ದಾರೆ. ಹೆಲ್ಮೆಟ್ ಧರಿಸದ ಅಪಘಾತಗಳಲ್ಲಿ93,763 ಜನ ಗಾಯಗೊಂಡಿದ್ದಾರೆ.

‘ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದಿರುವುದು ಅಪಘಾತಗಳಿಗೆ ಪ್ರಮುಖ ಕಾರಣವೆಂದಲ್ಲ. ಆದರೆ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಇಲ್ಲದಿರುವುದು ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗಿದೆ’ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT