ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೊಂದು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂಬ ಮೋದಿ ಸಲಹೆಗೆ ಮಮತಾ ತಿರುಗೇಟು

ನಮ್ಮನ್ನು ನಿಯಂತ್ರಿಸಲು ಬರಬೇಡಿ, ನಾವೇನು ನಿಮ್ಮ ಪಕ್ಷದ ಸದಸ್ಯರಲ್ಲ ಎಂದ ಪಶ್ಚಿಮ ಬಂಗಾಳ ಸಿಎಂ
Last Updated 2 ಏಪ್ರಿಲ್ 2021, 9:28 IST
ಅಕ್ಷರ ಗಾತ್ರ

ದಿನ್ಹಟಾ (ಪಶ್ಚಿಮ ಬಂಗಾಳ): ‘ನಂದಿಗ್ರಾಮ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದೇನೆ. ಆ ಕ್ಷೇತ್ರದಿಂದಲೇ ಗೆಲ್ಲುತ್ತೇನೆ‘ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ನಿಮ್ಮ ಸಲಹೆ ನನಗೆ ಅಗತ್ಯವಿಲ್ಲ‘ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸೋಲುವ ಸಾಧ್ಯತೆ ಇದೆ. ಹಾಗಾಗಿ ದೀದಿ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರಂತೆ‘ ಎಂದು ಪ‍್ರಧಾನಿ ನರೇಂದ್ರ ಮೋದಿ ಗುರುವಾರ ಉಲುಬೇರಿಯಾದ ರ್‍ಯಾಲಿಯಲ್ಲಿ ನೀಡಿದ್ದ ಹೇಳಿಕೆಗೆ, ಮಮತಾ ಬ್ಯಾನರ್ಜಿ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಬಂಗಾಳ ಜಿಲ್ಲೆಯ ಕೂಚ್‌ಬೆಹಾರ್‌ನ ದಿನ್ಹಾಟಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಮೊದಲು ನಿಮ್ಮ ಗೃಹಸಚಿವರನ್ನು ನಿಯಂತ್ರಿಸಿ, ಆ ನಂತರ ನಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುವಿರಂತೆ. ನಮ್ಮನ್ನು ನಿಯಂತ್ರಿಸುವುದಕ್ಕೆ, ನಾವೇನು ನಿಮ್ಮ ಪಕ್ಷದ ಸದಸ್ಯರಲ್ಲ‘ ಎಂದು ಮಮತಾ ಕಟುವಾಗಿ ಟೀಕಿಸಿದರು.

‘ಈ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿಲ್ಲ. ಗೃಹ ಸಚಿವ ಅಮಿತ್ ಶಾ ನಡೆಸುತ್ತಿದ್ದಾರೆ. ಮತದಾರರನ್ನು ಬೆದರಿಸಲು ಕೇಂದ್ರ ಪಡೆಗಳನ್ನು ಬಳಸಲಾಗುತ್ತಿದೆ‘ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT