ಕಂಗನಾ, ಅರ್ನಬ್ ವಿರುದ್ಧದ ನೋಟಿಸ್: ವರದಿ ಸಲ್ಲಿಸಲು ಸಮಯ ವಿಸ್ತರಣೆ

ಮುಂಬೈ: ಪತ್ರಕರ್ತ ಅರ್ನಬ್ ಗೋಸ್ವಾಮಿ ಮತ್ತು ನಟಿ ಕಂಗನಾ ರನೌತ್ ವಿರುದ್ಧ ದಾಖಲಾಗಿರುವ ಹಕ್ಕುಚ್ಯುತಿಗೆ ಸಂಬಂಧಿಸಿದ ವರದಿ ಸಲ್ಲಿಸಲು ಹಕ್ಕು ಬಾಧ್ಯತಾ ಸಮಿತಿಗೆ ನೀಡಿದ್ದ ಅವಧಿಯನ್ನು ವಿಸ್ತರಿಸಲು ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಒಪ್ಪಿಗೆ ನೀಡಿದೆ.
ಅವಧಿ ವಿಸ್ತರಿಸುವಂತೆ ಕೋರಿ ಹಕ್ಕು ಬಾಧ್ಯತಾ ಸಮಿತಿಯ ಮುಖ್ಯಸ್ಥ ದೀಪಕ್ ಕೇಸರ್ಕರ್ ಅವರು ಮಂಗಳವಾರ ಪ್ರಸ್ತಾವ ಮಂಡಿಸಿದರು. ಇದನ್ನು ಸದನದಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಿದ್ದು, ಮುಂದಿನ ಅಧಿವೇಶನದ ಕೊನೆಯ ದಿನದೊಳಗೆ ವರದಿ ಸಲ್ಲಿಸಲು ಅವಕಾಶ ನೀಡಲಾಗಿದೆ.
‘ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆ ನೀಡುವ ಮೂಲಕ ರನೌತ್ ಮತ್ತು ಗೋಸ್ವಾಮಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಚಿವ ಆದಿತ್ಯ ಠಾಕ್ರೆ ಮತ್ತು ಎಂವಿಎ ನಾಯಕರ ಮಾನಹಾನಿಯನ್ನುಂಟುಮಾಡಿದ್ದಾರೆ’ ಎಂದು ಆರೋಪಿಸಿ ಶಾಸಕ ಪ್ರತಾಪ್ ಸರ್‌ನಾಯಕ್ ಹಕ್ಕುಚ್ಯುತಿಯ ನಿರ್ಣಯದ ನೋಟಿಸ್ ಅನ್ನು ಸಭಾಧ್ಯಕ್ಷರಿಗೆ ಕಳುಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.