ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌: ದೇಶದಲ್ಲಿ 400ರ ಗಡಿ ದಾಟಿದ ಪ್ರಕರಣಗಳು, 7,189 ಮಂದಿಗೆ ಕೋವಿಡ್‌

Last Updated 25 ಡಿಸೆಂಬರ್ 2021, 6:23 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ರೂಪಾಂತರ ಓಮೈಕ್ರಾನ್‌ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈಗಾಗಲೇ 400ರ ಗಡಿ ದಾಟಿದೆ. ಇದುವರೆಗೆ ಭಾರತದಲ್ಲಿ ಒಟ್ಟು 415 ಓಮೈಕ್ರಾನ್‌ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 115 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಕೋವಿಡ್‌ ವರದಿಯಲ್ಲಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು 108 ಓಮೈಕ್ರಾನ್‌ ಪ್ರಕರಣಗಳು ದೃಢಪಟ್ಟಿವೆ. ನಂತರ ದೆಹಲಿಯಲ್ಲಿ 79, ಗುಜರಾತ್‌ನಲ್ಲಿ 43, ತೆಲಂಗಾಣದಲ್ಲಿ 38, ಕೇರಳದಲ್ಲಿ 37, ತಮಿಳುನಾಡಿನಲ್ಲಿ 34 ಮತ್ತು ಕರ್ನಾಟಕದಲ್ಲಿ 31 ಓಮೈಕ್ರಾನ್‌ ಕೇಸ್‌ಗಳು ವರದಿಯಾಗಿವೆ.

ಮತ್ತೊಂದೆಡೆ ಕೋವಿಡ್‌ ಸೋಂಕಿನ ಪ್ರಮಾಣವೂ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 7,189 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಕೋವಿಡ್‌ ಸೋಂಕಿತ ಸಂಖ್ಯೆ 3,47,79,815ಕ್ಕೆ ಏರಿಕೆಯಾಗಿದೆ. ಒಟ್ಟಾರೆ ದೇಶದಲ್ಲಿ 77,032 ಸಕ್ರಿಯ ಕೋವಿಡ್‌ ಪ್ರಕರಣಗಳು ಇವೆ.

ಕೋವಿಡ್‌ ಕಾರಣದಿಂದ 387 ಮಂದಿ ಮೃತರಾಗಿದ್ದಾರೆ. ಇದುವರೆಗೆ ದೇಶದಲ್ಲಿ 4,79,520 ಮಂದಿ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ದೈನಂದಿನ ಪ್ರಕರಣಗಳ ಸಂಖ್ಯೆಯನ್ನು ಹೋಲಿಸಿದರೆ 58 ದಿನಗಳಿಂದ 15,000ಕ್ಕಿಂತ ಕಡಿಮೆ ಪಾಸಿಟಿವ್‌ ಪ್ರಕರಣಗಳು ವರದಿಯಾಗುತ್ತಿವೆ. ಇದುವರೆಗೆ 3,42,23,263 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಮರಣ ಪ್ರಮಾಣವು ಶೇಕಡಾ 1.38 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT