ಲಖನೌ: ಚುನಾವಣೆಗೆ ಮುನ್ನ ದೆಹಲಿ ಸಿಎಂ ರಾಮನನ್ನು ಸ್ಮರಿಸುತ್ತಿದ್ದಾರೆ ಎಂದು ಲೇವಡಿ ಮಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಇಫ್ತಾರ್ ಕೂಟಗಳನ್ನು ನಡೆಸಲು ಪರಸ್ಪರ ಪೈಪೋಟಿ ನಡೆಸುತ್ತಿದ್ದ ವಿರೋಧ ಪಕ್ಷಗಳ ಸರ್ಕಾರಗಳು ತಮ್ಮ ‘ನಂಬಿಕೆಯನ್ನು ಜೈಲಿನಲ್ಲಿಟ್ಟಿದ್ದವು’ಎಂದು ಟೀಕಿಸಿದ್ದಾರೆ.

ಅಯೋಧ್ಯೆಯಲ್ಲಿನ ತಾತ್ಕಾಲಿಕ ಶ್ರೀರಾಮ ಮಂದಿರಕ್ಕೆ ಮಂಗಳವಾರ ಭೇಟಿ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈಷ್ಣೋದೇವಿ, ಶಿರಡಿ, ಹರಿದ್ವಾರ, ಋಷಿಕೇಶ ಮತ್ತು ದೇಶದ ಇತರ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ದೆಹಲಿಯ ಜನರಿಗೆ ಉಚಿತ ತೀರ್ಥಯಾತ್ರೆಯನ್ನು ಘೋಷಿಸಿದ್ದರು. ತೀರ್ಥಯಾತ್ರೆ ಪಟ್ಟಿಯಲ್ಲಿ ಶ್ರೀರಾಮ ಮಂದಿರದ ಭೇಟಿಯನ್ನೂ ಸೇರಿಸಲಾಗುವುದು ಎಂದು ಅವರು ಹೇಳಿದ್ದರು.

ಕೇಜ್ರಿವಾಲ್ ಹೇಳಿಕೆಯನ್ನು ಲೇವಡಿ ಮಾಡಿರುವ ಯೋಗಿ ಆದಿತ್ಯನಾಥ್, ಕೋವಿಡ್ ಲಾಕ್ಡೌನ್ ಸಮಯದಲ್ಲಿ ಯುಪಿ ಮತ್ತು ಬಿಹಾರದ ವಲಸೆ ಕಾರ್ಮಿಕರ ಸಾಮೂಹಿಕ ವಲಸೆಯನ್ನು ಉಲ್ಲೇಖಿಸಿ, ರಾಜ್ಯದಿಂದ ತಾವೇ ಓಡಿಸಿದ ಜನರಿಗೆ ಹೇಗೆ ಉಚಿತ ಕೊಡುಗೆಗಳನ್ನು ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

‘ದೆಹಲಿಯಂತಹ ಸಣ್ಣ ರಾಜ್ಯವನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಅವರು ಉತ್ತರ ಪ್ರದೇಶದ ಮೇಲೆ ಕಣ್ಣಿಟ್ಟಿದ್ದಾರೆ’ಎಂದು ಲೋಧ್ ಸಮುದಾಯದ ರ್ಯಾಲಿಯನ್ನು ಉದ್ದೇಶಿಸಿ ಸಿಎಂ ಹೇಳಿದರು.

ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದ ಜನರು ಮುಂಬರುವ ಚುನಾವಣೆ ಉದ್ದೇಶಕ್ಕಾಗಿ ರಾಮನಿಗೆ ನಮನ ಸಲ್ಲಿಸಲು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ ಎಂದು ಆದಿತ್ಯನಾಥ್ ಟೀಕಿಸಿದರು. ‘ಇದು ಒಳ್ಳೆಯ ಬೆಳವಣಿಗೆ. ಕನಿಷ್ಠ ಅವರು ರಾಮನ ಅಸ್ತಿತ್ವ ಮತ್ತು ಪ್ರಾಮುಖ್ಯತೆಯನ್ನು ಒಪ್ಪಿಕೊಂಡಿದ್ದಾರೆ’ ಎಂದು ಅವರು ಹೇಳಿದರು.

‘ಇದು ಹಿಂದಿನ ಮತ್ತು ಇಂದಿನ ಸರ್ಕಾರಗಳ ನಡುವಿನ ವ್ಯತ್ಯಾಸವಾಗಿದೆ ಮತ್ತು ಇದನ್ನು ಎಲ್ಲರಿಗೂ ತಿಳಿಸಬೇಕಾಗಿದೆ’ಎಂದು ಅವರು ಹೇಳಿದರು.

‘ಈ ಮೊದಲು ಯಾರು ಎಷ್ಟು ಇಫ್ತಾರ್ ಕೂಟಗಳನ್ನು ನಡೆಸುತ್ತಾರೆ ಎಂಬ ಪೈಪೋಟಿ ಅವರಲ್ಲಿತ್ತು? ಮತ್ತು ಅದನ್ನು ಸರ್ಕಾರದ ವೆಚ್ಚದಲ್ಲಿ ಮಾಡಲಾಗಿತ್ತು’ ಎಂದು ಆದಿತ್ಯನಾಥ್ ಹೇಳಿದರು, ‘ಆದರೆ ಅದು ಈಗ ಆಗುವುದಿಲ್ಲ. ನಾವು ಜಾತ್ಯತೀತ ರಾಜ್ಯವನ್ನು ಹೊಂದಿದ್ದರೆ, ಅದು ಎಲ್ಲರಿಗೂ ಸಮಾನವಾಗಿರಬೇಕು’ ಎಂದರು.

‘ಈ ಹಿಂದೆ ಹೋಳಿ, ದೀಪಾವಳಿ ಮತ್ತು ದಸರಾದಂತಹ ಹಬ್ಬಗಳ ಮೊದಲು ಕರ್ಫ್ಯೂ ವಿಧಿಸಲಾಗುತ್ತಿತ್ತು. ಹಬ್ಬಗಳನ್ನು ಆಚರಿಸಲು ಅವರು ಬಿಡುತ್ತಿರಲಿಲ್ಲ’ ಎಂದು ಮುಖ್ಯಮಂತ್ರಿ ಯೋಗಿ ಆಕ್ರೋಶ ವ್ಯಕ್ತಪಡಿಸಿದರು. ‘ಆಗ ಅವರು ತಮ್ಮ ನಂಬಿಕೆಯನ್ನು ಜೈಲಿನಲ್ಲಿ ಇಡುತ್ತಿದ್ದರು, ಆದರೆ ಇಂದು ಹಾಗಲ್ಲ’ ಎಂದು ಅವರು ಹೇಳಿದರು.

ಇದನ್ನೂ ಓದಿ.. ಮೃದು ಹಿಂದುತ್ವದತ್ತ ಹೊರಳಿದ ಎಎಪಿ; ದೆಹಲಿ ನಿವಾಸಿಗಳಿಗೆ ರಾಮಮಂದಿರದ ಉಚಿತ ದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.