ಭಾನುವಾರ, ಸೆಪ್ಟೆಂಬರ್ 27, 2020
28 °C

ಪಂಜಾಬ್: ಬಸ್ ಪ್ರಯಾಣಿಕನಿಂದ ₹31.68 ಲಕ್ಷ ಹಣ ವಶ

ಪಿಟಿಐ Updated:

ಅಕ್ಷರ ಗಾತ್ರ : | |

Currency

ಹೋಷಿಯಾರ್‌ಪುರ್: ಜಲಂದರ್‌ನಿಂದ ಹೊರಟ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನ ಬಳಿಯಿಂದ ಪಂಜಾಬ್ ಪೊಲೀಸರು ₹31.68 ಲಕ್ಷ ಅಕ್ರಮ ಹಣ ವಶಪಡಿಸಿಕೊಂಡಿದ್ದಾರೆ.

ಬಸ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಸುಖ್‌ವಿಂದರ್ ಎಂಬ ವ್ಯಕ್ತಿ ಬಳಿ ₹ 31,68,950 ಹಣ ಪತ್ತೆಯಾಗಿದೆ ಎಂದು ಹೋಷಿಯಾರ್‌ಪುರ್  ಹಿರಿಯ ಪೊಲೀಸ್ ಅಧಿಕಾರಿ ನವಜೋತ್ ಸಿಂಗ್ ಮಹಲ್ ಹೇಳಿದ್ದಾರೆ.

ಪಠಾಣ್‌ಕೋಣ್‌ನ ಜ್ಯುವೆಲ್ಲರಿಯೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಈತನಲ್ಲಿ ಹಣದ ಬಗ್ಗೆ ಯಾವುದೇ ದಾಖಲೆಗಳಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು