ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಯೋಗ ತರಗತಿಗಳಿಗೆ ಹಾಜರಾದ ಕೋವಿಡ್‌ ರೋಗಿಗಳಲ್ಲಿ ಚೇತರಿಕೆ: ಅಧ್ಯಯನ

Last Updated 6 ಮೇ 2022, 14:11 IST
ಅಕ್ಷರ ಗಾತ್ರ

ನವದೆಹಲಿ: ಮನೆಯಲ್ಲೇ ಪ್ರತ್ಯೇಕ ವಾಸದ ಸಂದರ್ಭದಲ್ಲಿ ಆನ್‌ಲೈನ್‌ ಯೋಗ ತರಗತಿಗಳಿಗೆ ಹಾಜರಾದ ಕೋವಿಡ್ ಸೋಂಕಿತರ ಪೈಕಿ ಶೇ 92ರಷ್ಟು ಮಂದಿಯಲ್ಲಿ ತಕ್ಷಣದ ಚೇತರಿಕೆ ಕಂಡುಬಂದಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

‘ದೆಹಲಿ ಔಷಧ ವಿಜ್ಞಾನಗಳು ಮತ್ತು ಸಂಶೋಧನಾ ವಿಶ್ವವಿದ್ಯಾಲಯ (ಡಿಪಿಎಸ್‌ಆರ್‌ಯು)’ ಅಧ್ಯಯನ ನಡೆಸಿತ್ತು.

ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿರುವ ಕೋವಿಡ್ ರೋಗಿಗಳಿಗಾಗಿ ದೆಹಲಿ ಸರ್ಕಾರವು ಉಚಿತ ಆನ್‌ಲೈನ್ ಯೋಗ ತರಗತಿಗಳನ್ನು ನಡೆಸುತ್ತಿದೆ. ಹೀಗೆ ತರಗತಿಗೆ ಹಾಜರಾದವರ ಪೈಕಿ ಕನಿಷ್ಠ ಶೇ 88.9 ಮಂದಿ ಉಸಿರಾಟದ ಸಮಸ್ಯೆ ಕಡಿಮೆಯಾಗಿರುವುದಾಗಿ ಹೇಳಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

‘ಯೋಗವನ್ನು ದಿನಚರಿಯ ಭಾಗವಾಗಿ ಮಾಡುವ ನಮ್ಮ ಉಪಕ್ರಮವನ್ನು ಜನರು ಹೃತ್ಪೂರ್ವಕವಾಗಿ ಸ್ವೀಕರಿಸಿರುವುದು ಕೋವಿಡ್ ರೋಗಿಗಳ ಮೇಲಿನ ಅಧ್ಯಯನದಿಂದ ತಿಳಿದುಬಂದಿದೆ. ಕೋವಿಡ್ ಸಂದರ್ಭದಲ್ಲಿ ಸೋಂಕಿತರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳಲು ನೆರವಿನ ಅಗತ್ಯವಿದೆ. ಹೆಚ್ಚಿನ ರೋಗಿಗಳು ಏಕಾಂಗಿತನ ಮತ್ತು ಪ್ರತ್ಯೇಕವಾಸದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಯೋಗ ತರಬೇತುದಾರರು ಅವರ (ಸೋಂಕಿತರ) ಜತೆಗಿರುತ್ತಾರೆ’ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT