ಭಾನುವಾರ, ಡಿಸೆಂಬರ್ 5, 2021
25 °C

Padma Awards| ಸಿಂಧು, ರಾಣಿ ರಾಂಪಾಲ್‌, ಕಂಗನಾ ಸೇರಿ ಹಲವರಿಗೆ ‘ಪದ್ಮ’ ಗೌರವ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು, ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌, ನಿವೃತ್ತ ಏರ್‌ ಮಾರ್ಷಲ್‌ ಡಾ. ಪದ್ಮಾ ಬಂಡೋಪಾದ್ಯಾಯ, ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್‌ ಚಾನುಲಾಲ್‌ ಮಿಶ್ರಾ ಸೇರಿದಂತೆ ಹಲವರು ಇಂದು ರಾಷ್ಟ್ರಪತಿಗಳಿಂದ ‘ಪದ್ಮ ಪ್ರಶಸ್ತಿ’ ಸ್ವೀಕರಿಸಿದರು.

ಇವರ ಜೊತೆಗೆ, ಬಾಲಿವುಡ್‌ ತಾರೆ ಕಂಗನಾ ರನೌಟ್‌, ಗಾಯಕ ಅದ್ನಾನ್‌ ಸಮಿ ಅವರೂ ಪದ್ಮಶ್ರೀ ಪ್ರಶಸ್ತಿ ಪಡೆದರು.

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌, ಜಾರ್ಜ್‌ ಫರ್ನಾಂಡಿಸ್‌, ಅರುಣ್‌ ಜೇಟ್ಲಿ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುಷ್ಮಾ ಅವರ ಪುತ್ರಿ ಬಾನುಶ್ರೀ ಸ್ವರಾಜ್‌ ಅವರು ರಾಷ್ಟ್ರಪತಿಗಳಿಂದ ಪದವಿ ಸ್ವೀಕರಿಸಿದರು.

ಕರ್ನಾಟಕದ ಅಕ್ಷರ ಸಂತ ಹರೇಕಳ ಹಾಜಬ್ಬ, ಉದ್ಯಮಿ ವಿಜಯ ಸಂಕೇಶ್ವರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು