ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಐಎಸ್‌ಐ ಮುಖ್ಯಸ್ಥ ಹಮೀದ್‌ ದಿಢೀರ್ ವರ್ಗಾವಣೆ

ಪೇಶಾವರ ಕಾರ್ಪ್ಸ್ ಕಮಾಂಡರ್ ಆಗಿ ನೇಮಕ
Last Updated 6 ಅಕ್ಟೋಬರ್ 2021, 12:18 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಬಲ ಗೂಢಾಚಾರಿ ಸಂಸ್ಥೆ ಐಎಸ್ಐನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಸೇನೆಯು ಬುಧವಾರ ದಿಢೀರ್ ವರ್ಗಾವಣೆ ಮಾಡಿ ಪೇಶಾವರ ಕಾರ್ಪ್ಸ್ ಕಮಾಂಡರ್ ಆಗಿ ನೇಮಕ ಮಾಡಿದೆ.

ಪಾಕಿಸ್ತಾನ ಸೇನೆಯು ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಮೀರ್ ಅವರನ್ನು ಗುಜ್ರಾನ್ ವಾಲಾ ಕಾರ್ಪ್ಸ್ ಕಮಾಂಡರ್ ಆಗಿ ಹಾಗೂ ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಅವರನ್ನು ಸೇನೆಯ ಕ್ವಾರ್ಟರ್ ಮಾಸ್ಟರ್ ಜನರಲ್ (ಕ್ಯೂಎಂಜಿ) ಆಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ. ಆದರೆ, ಹಮೀದ್ ಅವರ ಸ್ಥಾನಕ್ಕೆ ಇದುವರೆಗೆ ಯಾರನ್ನೂ ನೇಮಿಸಿಲ್ಲ.

2019ರ ಜೂನ್ 16ರಂದು ಹಮೀದ್ ಅವರನ್ನು ಐಎಸ್ಐ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಜ್ವಾ ಅವರ ನಿಕಟವರ್ತಿ ಎಂದೇ ಪರಿಗಣಿಸಲಾಗಿರುವ ಹಮೀದ್ ಅವರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತಾ ಸವಾಲುಗಳ ನಿರ್ಣಾಯಕ ಸಂದರ್ಭದಲ್ಲಿ ಐಎಸ್ಐ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಅಂತೆಯೇ ಅಫ್ಗಾನಿಸ್ತಾನದಲ್ಲಿನ ನಿರ್ಣಾಯಕ ಬದಲಾವಣೆಗಳ ವೀಕ್ಷಕರೂ ಆಗಿದ್ದರು. ಆಗಸ್ಟ್‌ನಲ್ಲಿ ಅಫ್ಗನ್ ತಾಲಿಬಾನಿಗಳ ವಶವಾಯಿತು.‌

ಸೆಪ್ಟೆಂಬರ್‌ನಲ್ಲಿ ಕಾಬೂಲ್‌ಗೆ ಭೇಟಿ ನೀಡಿದ್ದ ಅವರು, ‘ಅಫ್ಗಾನಿಸ್ತಾನದಲ್ಲಿ ಎಲ್ಲವೂ ಸರಿಯಾಗಲಿದೆ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT