ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೊಳಗೆ ನುಸುಳಲು ಪ್ರತಿಕೂಲ ಹವಾಮಾನದ ಲಾಭ ಪಡೆವ ಉಗ್ರರು

ಎಲ್‌ಒಸಿಯಲ್ಲಿ ಭದ್ರತಾ ಪಡೆಗಳ ತೀವ್ರ ನಿಗಾ: ಲೆ. ಜ. ರಾಜು
Last Updated 27 ಡಿಸೆಂಬರ್ 2020, 10:51 IST
ಅಕ್ಷರ ಗಾತ್ರ

ಶ್ರೀನಗರ: ದೇಶದ ಆಂತರಿಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಉದ್ವಿಗ್ನತೆಯನ್ನು ಹೆಚ್ಚಿಸಲು ಹತಾಶ ಪ್ರಯತ್ನಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅಭಿಪ್ರಾಯಪಟ್ಟರು.

ಸಂವಾದವೊಂದರಲ್ಲಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ಮೂಲಕ ‘200 ರಿಂದ 250 ಉಗ್ರರು ಭಾರತಕ್ಕೆ ನುಸುಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ‘ ಎಂಬುದಾಗಿ ಹೇಳಿದರು.

‘ಉಗ್ರರು ಒಳನುಸುಳುವ ಪ್ರಯತ್ನಕ್ಕೆಪ್ರತಿಕೂಲ ಹವಾಮಾನವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಭದ್ರತಾ ಪಡೆಗಳು ಗಡಿ ನಿಯಂತ್ರಣ ರೇಖೆ ಮತ್ತು ದಕ್ಷಿಣದ ಪಿರ್‌ಪಂಜಾಲ್‌ನ ಭಾಗದ ಮೇಲೆ ತೀವ್ರ ನಿಗಾವಹಿಸುತ್ತಿವೆ‘ ಎಂದು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ಕುರಿತು ಮಾತನಾಡಿದ ರಾಜು ಅವರು, ‘ಚುನಾವಣೆ ಶಾಂತಿಯುತವಾಗಿ ನಡೆದಿರುವುದು ತುಂಬಾ ಸಂತೋಷದ ವಿಷಯ. ಕಣಿವೆ ರಾಜ್ಯದ ಜನರು ಅಭಿವೃದ್ಧಿ ಬಯಸುವ ಜತೆಗೆ, ಪ್ರಜಾಪ್ರಭುತ್ವವನ್ನು ಉತ್ತೇಜಿಸಲು ಮತ ಚಲಾಯಿಸಿದ್ದಾರೆ‘ ಎಂದು ಹೇಳಿದರು.

‘ಚುನಾಯಿತ ಪ್ರತಿನಿಧಿಗಳು ಜನರಿಗಾಗಿ ಮತ್ತು ಜನರು ಅಭಿವೃದ್ಧಿ ಚಟುವಟಿಕೆಯ ವಿಷಯದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಸಮಯ ಬಂದಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT