ಬುಧವಾರ, ಮೇ 25, 2022
29 °C

ಬಂದರು ಪ್ರಾಧಿಕಾರ ಮಸೂದೆ–2020ಕ್ಕೆ ಸಂಸತ್ತಿನ ಅನುಮೋದನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ 12 ಪ್ರಮುಖ ಬಂದರುಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಮಸೂದೆಗೆ ಸಂಸತ್ತಿನಲ್ಲಿ ಬುಧವಾರ ಅನುಮೋದನೆ ಸಿಕ್ಕಿದೆ. 

ಈ ಮಸೂದೆಯು ದೇಶದ 12 ಪ್ರಮುಖ ಬಂದರುಗಳಿಗೆ ನಿರ್ಧಾರ ಕೈಗೊಳ್ಳಲು ಹೆಚ್ಚಿನ ಸ್ವಾಯತ್ತತೆ ನೀಡಲಿದೆ. ಅಲ್ಲದೆ ಈ ಮಸೂದೆಯಡಿ ಮಂಡಳಿಗಳನ್ನು ರಚಿಸಿ, ಬಂದರುಗಳನ್ನು ವೃತ್ತಿಪರಗೊಳಿಸಲಾಗುವುದು.

ಬಂದರು ಪ್ರಾಧಿಕಾರ ಮಸೂದೆ–2020 ಪರವಾಗಿ 84 ಮತಗಳು ಬಂದರೆ, ವಿರುದ್ಧವಾಗಿ 44 ಮಂದಿ ಮತ ಚಲಾಯಿಸಿದರು. ಮಸೂದೆಯು ಬಹುಮತದ ಮೂಲಕ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು. ಲೋಕಸಭೆಯು ಸೆಪ್ಟೆಂಬರ್‌ 23, 2020ರಲ್ಲಿ ಈ ಮಸೂದೆಗೆ ಅನುಮೋದನೆ ನೀಡಿತ್ತು.

‘ಈ ಮಸೂದೆಯ ಮೂಲಕ ಯಾವುದೇ ಪ್ರಮುಖ ಬಂದರುಗಳನ್ನು ಖಾಸಗೀಕರಣ ಮಾಡಲಾಗುವುದಿಲ್ಲ. ಬದಲಿಗೆ ಖಾಸಗಿ ಬಂದರುಗಳೊಂದಿಗೆ ಸ್ಪರ್ಧಿಸಲು ದೇಶದ ಪ್ರಮುಖ ಬಂದರುಗಳಿಗೆ ನೆರವಾಗುವುದೇ ಈ ಮಸೂದೆಯ ಉದ್ಧೇಶವಾಗಿದೆ’ ಎಂದು ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಮನ್ಸುಖ್ ಮಾಂಡವಿಯಾ ಅವರು ತಿಳಿಸಿದರು.

‘ದೇಶದ ಪ್ರಮುಖ ಬಂದರುಗಳಿಗೆ ನಿಯಂತ್ರಣ, ಕಾರ್ಯಾಚರಣೆ ಮತ್ತು ಯೋಜನೆಯನ್ನು ಒದಗಿಸುವುದೇ ಈ ಮಸೂದೆಯ ಗುರಿಯಾಗಿದೆ. ಈ ಬಂದರುಗಳ ನಿಯಂತ್ರಣ ಮತ್ತು ನಿರ್ವಹಣೆ ಮೇಲೆ ಮಂಡಳಿ ಅಧಿಕಾರಿಗಳು ನಿಗಾವಹಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ದೀನ್‌ದಯಾಳ್‌‌, ಮುಂಬೈ, ಜೆಎನ್‌ಪಿಟಿ, ಮರ್ಮುಗೋವಾ, ನವ ಮಂಗಳೂರು, ಕೊಚ್ಚಿ, ಚೆನ್ನೈ, ಕಾಮರಾಜರ್‌, ಒ. ಚಿದಂಬರನಾರ್, ವಿಶಾಖಪಟ್ಟಣಂ, ಪರದೀಪ್ ಮತ್ತು ಕೋಲ್ಕತ್ತ ದೇಶದ ಪ್ರಮುಖ 12 ಬಂದರುಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು