ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 26ಕ್ಕೆ ಪೂರ್ಣ ಚಂದ್ರಗ್ರಹಣ: ಈಶಾನ್ಯ ಭಾರತದ ಕೆಲವೆಡೆ ಗೋಚರ

Last Updated 24 ಮೇ 2021, 15:30 IST
ಅಕ್ಷರ ಗಾತ್ರ

ನವದೆಹಲಿ: ಮೇ.26ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತಿದ್ದು, ಈಶಾನ್ಯ ಭಾರತದ ಕೆಲ ಭಾಗ, ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾದ ಕರಾವಳಿ ಭಾಗಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಲ್ಪಪ್ರಮಾಣದಲ್ಲಿ ಗೋಚರಿಸಲಿದೆ.

ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರವನ್ನು ಒಳಗೊಂಡ ಪ್ರದೇಶದಲ್ಲಿ ಗ್ರಹಣ ಗೋಚರಿಸುತ್ತದೆ.

‘ಭಾರತದಲ್ಲಿ ಚಂದ್ರೋದಯದ ನಂತರ, ಗ್ರಹಣದ ಭಾಗಶಃ ಅಂತ್ಯವು ಈಶಾನ್ಯ ಭಾಗಗಳಿಂದ (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾದ ಕೆಲವು ಭಾಗಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಲ್ಪಾವಧಿಯಲ್ಲಿ ಗೋಚರಿಸುತ್ತದೆ.’ ಎಂದು ಐಎಂಡಿ ಹೇಳಿದೆ.

ಭಾಗಶಃ ಗ್ರಹಣವು ಮಧ್ಯಾಹ್ನ 3.15 ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 6.23ಕ್ಕೆ ಕೊನೆಗೊಳ್ಳಲಿದೆ. ಸಂಪೂರ್ಣ ಗ್ರಹಣವು ಸಂಜೆ 4.39 ಕ್ಕೆ ಪ್ರಾರಂಭವಾಗಿ ಸಂಜೆ 4.58ಕ್ಕೆ ಕೊನೆಗೊಳ್ಳಲಿದೆ.

ಸಂಜೆ 5.38 ರಿಂದ ಪೋರ್ಟ್ ಬ್ಲೇರ್‌ನಿಂದ 45 ನಿಮಿಷಗಳ ಕಾಲ ಗ್ರಹಣ ವೀಕ್ಷಿಸಬಹುದು. ಸಂಜೆ 6.21 ರಿಂದ ಪುರಿ ಮತ್ತು ಮಾಲ್ಡಾದಿಂದ ನೋಡಬಹುದು. ಆದರೆ, ಎರಡು ನಿಮಿಷ ಮಾತ್ರ ಕಾಣಸಿಗುತ್ತದೆ.

ಮುಂದಿನ ಚಂದ್ರ ಗ್ರಹಣವು ನವೆಂಬರ್ 19 ರಂದು ಸಂಭವಿಸಲಿದ್ದು, ಭಾರತದಲ್ಲಿ ಗೋಚರಿಸುತ್ತದೆ. ಇದು ಭಾಗಶಃ ಚಂದ್ರ ಗ್ರಹಣವಾಗಿರುತ್ತದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಗಡಿಯಲ್ಲಿ ಚಂದ್ರೋದಯದ ನಂತರ ಭಾಗಶಃ ಹಂತದ ಅಂತ್ಯವು ಅಲ್ಪಾವಧಿಗೆ ಗೋಚರಿಸುತ್ತದೆ.

ಹುಣ್ಣಿಮೆಯ ದಿನದಂದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಒಂದೇ ರೇಖೆಯಲ್ಲಿ ಬಂದಾಗ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT