ಶುಕ್ರವಾರ, ಮೇ 20, 2022
19 °C
ಟ್ವಿಟರ್‌ನಲ್ಲಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಬೆದರಿಕೆ

ಬಾಂಬ್ ಹಾಕಿ ಆಂಧ್ರ ಸಿಎಂ ಹತ್ಯೆ ಮಾಡ್ತೇನೆಂದ ನಟ ಪವನ್ ಕಲ್ಯಾಣ್ ಅಭಿಮಾನಿ ಅರೆಸ್ಟ್

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಅಮರಾವತಿ: ಮಾನವ ಬಾಂಬರ್ ಬಳಸಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುವುದಾಗಿ ಟ್ವಿಟರ್‌ನಲ್ಲಿ ಬೆದರಿಕೆ ಹಾಕಿದ್ದ ನಟ ಪವನ್ ಕಲ್ಯಾಣ ಅಭಿಮಾನಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಾಜಮಹೇಂದ್ರವರಂನ ರಾಜಾಪಲೇಮ್ ಫಣಿ (27) ಎಂದು ಗುರುತಿಸಲಾಗಿದೆ.

ಈತ ಜನವರಿ 16 ರಂದು ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಟ್ವೀಟ್‌ಗಳು ವೈರಲ್ ಆಗಿದ್ದನ್ನು ಗಮನಿಸಿ ಅವುಗಳನ್ನು ಅಳಿಸಿ ಹಾಕಿದ್ದ.

ಈ ಕುರಿತು ಜಗನ್ ಸೇವಾದಳದ ಉಪಾಧ್ಯಕ್ಷ ಮಲ್ಯಂ ಶ್ರಿಕಾಂತ್ ಎನ್ನುವರು ತಿರುಪತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಐಪಿ ವಿಳಾಸ ಆಧರಿಸಿ ಬೆದರಿಕೆ ಹಾಕಿದ್ದವನನ್ನು ಬಂಧಿಸಿದ್ದಾರೆ.

‘ರಾಜಾಪಲೇಮ್ ಫಣಿ ಈತನು ಪವನ್ ಕಲ್ಯಾಣ ಅವರ ಜನಸೇನಾ ಪಕ್ಷದ ಬೆಂಬಲಿಗನಾಗಿದ್ದ. ಬಂಧಿತನ ಮೇಲೆ ಐಪಿಸಿ ಕಲಂ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಸಿಐಡಿ ಸೈಬರ್ ಕ್ರೈಂ ಎಸ್‌ಪಿ ಜಿ.ಆರ್. ರಾಧಿಕಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು