ಬೆಂಗಳೂರು: ಪಿಂಚಣಿ ನಿಧಿಗೆ ಉದ್ಯೋಗಿ ಗಳು ತಮ್ಮ ಪೂರ್ಣ ವೇತನದ ಶೇ 8.33ರಷ್ಟನ್ನು ಪಾವತಿಸಲು ಸುಪ್ರೀಂಕೋರ್ಟ್ ಅವಕಾಶ ಕೊಟ್ಟಿದೆ. ತಿದ್ದುಪತಿ ಕಾಯ್ದೆಯನ್ನು ಎತ್ತಿ ಹಿಡಿದಿದೆ

ಕೋರ್ಟ್ ಹೇಳಿದ್ದೇನು?: ಉದ್ಯೋಗಿ ಗಳ ಪಿಂಚಣಿ ಯೋಜನೆಗೆ (ಇಪಿಎಸ್) 2014ರಲ್ಲಿ ಮಾಡಿದ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇಪಿಎಸ್ ಆಯ್ಕೆ ಮಾಡಿಕೊಂಡಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘದ ಸದಸ್ಯರು ತಮ್ಮ ಠೇವಣಿಯನ್ನು ಹೆಚ್ಚಿಸುವ ಅವಕಾಶವನ್ನು ನೀಡಲಾಗಿದೆ. ಈ ಆಯ್ಕೆಯನ್ನು ಪಡೆದುಕೊಳ್ಳಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ.

2014ರ ಸೆಪ್ಟೆಂಬರ್ 1 ಅಥವಾ ಅದಕ್ಕೂ ಮೊದಲಿನಿಂದಲೇ ಇಪಿಎಸ್‌ನ ಸದಸ್ಯರಾಗಿರುವವರು ತಮ್ಮ ಪೂರ್ಣ ವೇತನದ ಶೇ 8.33ರಷ್ಟನ್ನು ವಂತಿಗೆಯಾಗಿ ಪಾವತಿಸಬಹುದು. ಈವರೆಗೆ ಗರಿಷ್ಠ 15,000 ವೇತನಕ್ಕೆ ಮಾತ್ರ ಶೇ 8.33ರಷ್ಟು ವಂತಿಗೆ ಪಾವತಿಸಲು ಅವಕಾಶ ಇತ್ತು.

ತಿಂಗಳಿಗೆ ₹15,000ಕ್ಕಿಂತ ಹೆಚ್ಚಿನ ವೇತನಕ್ಕೆ ಹೆಚ್ಚುವರಿಯಾಗಿ ಶೇ 1.16ರಷ್ಟು ವಂತಿಗೆ ಪಾವತಿಸಬೇಕು ಎಂಬುದು ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಇತರ ಅವಕಾಶಗಳ ಕಾಯ್ದೆ–1952ರ ಉಲ್ಲಂಘನೆಯಾಗುತ್ತದೆ ಎಂದಿದೆ. ಹಾಗಾಗಿ ಈ ಅವಕಾಶವನ್ನು ರದ್ದುಪಡಿಸಲಾಗಿದೆ.

2014ರ ತಿದ್ದುಪಡಿ ಏನು ಹೇಳುತ್ತದೆ?: ಇಪಿಎಸ್‌ಗೆ 2014ರ ಆಗಸ್ಟ್‌ನಲ್ಲಿ ತಿದ್ದುಪಡಿ ಮಾಡಲಾಯಿತು. ಪಿಂಚಣಿಯ ಗರಿಷ್ಠ ವೇತನವನ್ನು ತಿಂಗಳಿಗೆ ₹15,000ಕ್ಕೆ ಏರಿಸಿತು. ಇಪಿಎಸ್‌ನ ಸದಸ್ಯರು ಮತ್ತು ಉದ್ಯೋಗದಾತರು ಇಪಿಎಸ್‌ಗಾಗಿ ತಿಂಗಳ ವೇತನದ ಶೇ 8.33ರಷ್ಟನ್ನು ವಂತಿಗೆ ನೀಡಲು ಅವಕಾಶ ಇದೆ. ಆದರೆ, ತಿಂಗಳಿಗೆ ₹15,000ಕ್ಕಿಂತ ಹೆಚ್ಚಿನ ವೇತನ ಪಡೆಯುವವರು ಹೆಚ್ಚುವರಿ ವೇತನದ ಶೇ 1.16ರಷ್ಟನ್ನು ವಂತಿಗೆ ರೂಪದಲ್ಲಿ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.