ಪೆಟ್ರೋಲ್ ದರ: ಇನ್ನು ದಿನವೂ ₹0.8 & ₹0.3 ಏರಿಕೆ ನಿರೀಕ್ಷಿಸಬಹುದು- ರಾಹುಲ್

ಬೆಂಗಳೂರು: 'ಪೆಟ್ರೋಲ್ ದರದಲ್ಲಿ ಇನ್ನು ಪುನಃ ಪ್ರತಿದಿನವೂ ₹0.8 ಮತ್ತು ₹0.3 ಏರಿಕೆಯನ್ನು ನಿರೀಕ್ಷಿಸಬಹುದು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ ₹8 ಮತ್ತು ₹6 ಕಡಿತ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಓದಿ... ಎಂಟಿಬಿಗೆ ನಿಂಬೆಹಣ್ಣು ಹಿಡಿದು ಡ್ಯಾನ್ಸ್ ಮಾಡುವುದರಲ್ಲೇ ಆಸಕ್ತಿ: ಕಾಂಗ್ರೆಸ್
'ಮೇ 1, 2020ರಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹69.5 ಇತ್ತು. ಮಾರ್ಚ್ 1, 2020ರಲ್ಲಿ ಪೆಟ್ರೋಲ್ ಬೆಲೆ ₹95.4 ಇತ್ತು. ಮೇ 1, 2022ರಲ್ಲಿ ₹105.4 ಇತ್ತು. ಇದೀಗ ಮೇ 22, 2022ರಂದು ₹96.7 ಇದೆ' ಎಂದು ರಾಹುಲ್ ಗಾಂಧಿ ದರ ಪಟ್ಟಿಯನ್ನು ಮಾಡಿದ್ದಾರೆ.
'ಇದೀಗ ಪೆಟ್ರೋಲ್ ದರ 'ವಿಕಾಸ'ದ ರೂಪದಲ್ಲಿ ಪುನಃ ಪ್ರತಿದಿನವೂ ₹0.8 ಮತ್ತು ₹0.3 ಏರಿಕೆಯನ್ನು ನಿರೀಕ್ಷಿಸಬಹುದು. ಜನರನ್ನು ಮೂರ್ಖರನ್ನಾಗಿಸುವುದನ್ನು ಸರ್ಕಾರ ನಿಲ್ಲಿಸಬೇಕು. ದಾಖಲೆ ಪ್ರಮಾಣದ ಹಣದುಬ್ಬರದಿಂದ ನಿಜವಾದ ನಿರಾಳತೆಗೆ ಜನರು ಅರ್ಹರು' ಎಂದು ರಾಹುಲ್ ಗಾಂಧಿ ಟ್ವೀಟ್ನಲ್ಲಿ ಹೇಳಿದ್ದಾರೆ.
ಓದಿ... ಮುನಿರಾಜು ಅವರಿಂದ ಬಿಜೆಪಿಯ ಅನೈತಿಕತೆ, ಕೊಳಕು ಕೃತ್ಯ ಬಯಲಾಗಿದೆ: ಕಾಂಗ್ರೆಸ್
Petrol Prices
May 1, 2020: ₹69.5
Mar 1, 2022: ₹95.4
May 1, 2022: ₹105.4
May 22, 2022: ₹96.7Now, expect Petrol to see ‘Vikas’ in daily doses of ₹0.8 and ₹0.3 again.
Govt must stop fooling citizens. People deserve genuine relief from record inflation.
— Rahul Gandhi (@RahulGandhi) May 22, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.